ಹೊಸದಿಲ್ಲಿ: ಫೆಬ್ರವರಿಯಿಂದ ಪ್ರತಿಭಟನಾ ನಿರತ ರೈತರು ಬೀಡುಬಿಟ್ಟಿದ್ದ ಶಂಭು ಗಡಿಯಲ್ಲಿ ಹೆದ್ದಾರಿಯನ್ನು ಭಾಗಶಃ ಪುನರಾರಂಭಿಸಲು ಒಂದು ವಾರದೊಳಗೆ ಪಟಿಯಾಲ ಮತ್ತು ಅಂಬಾಲಾ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಸಭೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಸೋಮವಾರ(ಆಗಸ್ಟ್ 12) ನಿರ್ದೇಶನ ನೀಡಿದೆ.
ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮನವೊಲಿಸಿ ಟ್ರಾಕ್ಟರ್‌ಗಳನ್ನು ರಸ್ತೆಯಿಂದ ತೆಗೆಯುವಂತೆ ನ್ಯಾಯಾಲಯ ಪಂಜಾಬ್ ಸರಕಾರವನ್ನು ಕೇಳಿ, ಹೆದ್ದಾರಿಗಳು ಪಾರ್ಕಿಂಗ್ ಸ್ಥಳವಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಪಂಜಾಬ್ ಮತ್ತು ಹರಿಯಾಣ ಸರಕಾರವು ಸಮಿತಿಯನ್ನು ರಚಿಸಿ ಪ್ರತಿಭಟನಾನಿರತ ರೈತರೊಂದಿಗೆ ಸಭೆಗಳನ್ನು ನಡೆಸಲು ರಾಜಕೀಯೇತರ ಹೆಸರುಗಳನ್ನು ಸೂಚಿಸಿದ್ದಕ್ಕಾಗಿ ಶ್ಲಾಘಿಸಿದೆ.
ಆಂಬ್ಯುಲೆನ್ಸ್‌ಗಳು, ಅಗತ್ಯ ಸೇವೆಗಳು, ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಪಕ್ಕದ ಪ್ರದೇಶಗಳ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶಂಭು ಆದೇಶದಲ್ಲಿ ರಸ್ತೆಯನ್ನು ಭಾಗಶಃ ತೆರೆಯುವ ಅಗತ್ಯವಿದೆ. ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಸಮಿತಿಯ ನಿಯಮಗಳ ಕುರಿತು ನಾವು ಸಂಕ್ಷಿಪ್ತ ಆದೇಶವನ್ನು ನೀಡುತ್ತೇವೆ” ಎಂದು ಪೀಠ ಹೇಳಿದೆ.
ಶಂಭು ಗಡಿಯಲ್ಲಿ ತಮ್ಮ ಉತ್ಪನ್ನಗಳಿಗೆ ಕಾನೂನುಬದ್ಧವಾಗಿ ಖಾತ್ರಿ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತಲುಪಲು ಪರಿಸ್ಥಿತಿಯನ್ನು ಚುರುಕುಗೊಳಿಸಿ ಸ್ವತಂತ್ರ ಸಮಿತಿಯನ್ನು ಸ್ಥಾಪಿಸಲು ಕೆಲವು ತಟಸ್ಥ ವ್ಯಕ್ತಿಗಳ ಹೆಸರನ್ನು ಸೂಚಿಸುವಂತೆ ಪಂಜಾಬ್ ಮತ್ತು ಹರಿಯಾಣ ಸರಕಾರಗಳಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಕೇಳಿತ್ತು.
ಫೆಬ್ರವರಿ 13 ರಿಂದ ಪ್ರತಿಭಟನಾ ನಿರತ ರೈತರು ಅಂಬಾಲಾ ಬಳಿಯ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ಒಂದು ವಾರದೊಳಗೆ ತೆಗೆದುಹಾಕುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರದ ಮನವಿಯನ್ನು ವಿಚಾರಣೆ ನಡೆಸುತ್ತಿದೆ.
ಫೆಬ್ರವರಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ ನಂತರ ಹರಿಯಾಣ ಸರಕಾರವು ಅಂಬಾಲಾ-ಹೊಸದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿತ್ತು.