Advertisement

ಮನೋಜ್‌ ತಿವಾರಿ ವಿರುದ್ಧ ಕೋರ್ಟ್‌ ನಿಂದನೆ ಕೈಬಿಟ್ಟ ಸುಪ್ರೀಂ ಕೋರ್ಟ್‌

11:25 AM Nov 22, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ವಿರುದ್ಧದ ದಿಲ್ಲಿ ಸೀಲಿಂಗ್‌ (ಬೀಗಮುದ್ರೆ ಮುರಿದ) ಕೇಸಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ ಇಂದು ಗುರುವಾರ ನಿರಾಕರಿಸಿದೆ. 

Advertisement

‘ಮನೋಜ್‌ ತಿವಾರಿ ಬೀಗ ಮುರಿದ ಪ್ರಕರಣವು ನ್ಯಾಯಾಂಗ ನಿಂದನೆಯಾಗುವುದಿಲ್ಲ’ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ‘ಈಶಾನ್ಯ ದಿಲ್ಲಿಯ ಈ ಸಂಸದನ ವಿರುದ್ಧ ಭಾರತೀಯ ಜನತಾ ಪಕ್ಷವೇ ಕ್ರಮ ಜರುಗಿಸಬೇಕಾಗಿದೆ’ ಎಂದು ಹೇಳಿದೆ.

“ಪೌರಾಡಳಿತ ಸಂಸ್ಥೆಯು ನಿರ್ಬಂಧಿತ ಆವರಣಕ್ಕೆ ಹಾಕಿದ್ದ ಬೀಗವನ್ನು ಒಡೆದಿರುವ ತಿವಾರಿ ಕ್ರಮವನ್ನು ಒಪ್ಪುವಂತಿಲ್ಲ; ಆತನ ವರ್ತನೆ ನಮಗೆ ತೀವ್ರ ನೋವುಂಟುಮಾಡಿದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹಾಗಿದ್ದರೂ ಕೋರ್ಟ್‌ ತಿವಾರಿ ವಿರುದ್ಧದ ಕೋರ್ಟ್‌ ನಿಂದನೆಯ ಕೇಸನ್ನು ತಾನು ಇಲ್ಲಿಗೆ ಕೊನೆಗೊಳಿಸುತ್ತಿರುವುದಾಗಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next