Advertisement

ವಕೀಲರಿಗೆ ಜೇಷ್ಠತೆ ವೇಳೆ ಪಾರದರ್ಶಕತೆಗೆ ಸೂಚನೆ

10:02 AM Oct 13, 2017 | Team Udayavani |

ಹೊಸದಿಲ್ಲಿ: ಭಾರತದ ನ್ಯಾಯಾ ಲಯಗಳ ನ್ಯಾಯವಾದಿಗಳಿಗೆ ಜೇಷ್ಠತೆಯನ್ನು ನೀಡುವ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವ ನಿಟ್ಟಿ ನಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಹೆಜ್ಜೆಯಿ ಟ್ಟಿದ್ದು, ಕೆಲವು ಮಾರ್ಗಸೂಚಿಗಳನ್ನು ನೀಡಿದೆ. 

Advertisement

ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಅವರು, ವಕೀಲರಿಗೆ ಉನ್ನತ ಹುದ್ದೆಗಳನ್ನು ನೀಡುವ ಕುರಿತಂತೆ ಪಾರದರ್ಶಕತೆ ತರ ಬೇಕೆಂದು ಆಗ್ರಹಿಸಿ ಸಲ್ಲಿಸಿದ್ದ ಪಿಐಎಲ್‌ ಹಿನ್ನೆಲೆ ಯಲ್ಲಿ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾ ಗಿದೆ.  ವಕೀಲರಿಗೆ ಜೇಷ್ಠತೆ ನೀಡುವ ವಿಚಾರದಲ್ಲಿ ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಕೈಬಿಟ್ಟು ಹೊಸ ವ್ಯವಸ್ಥೆ ಜಾರಿಗೆ ತರಬೇಕೆಂದು ಆಶಿಸಿರುವ ನ್ಯಾ| ರಂಜನ್‌ ಗೊಗೊಯ್‌ ನೇತೃ ತ್ವದ ನ್ಯಾಯಪೀಠ, ಇದಕ್ಕಾಗಿ ಒಂದು ಕಾರ್ಯಾಲಯ, ಅದರ ಮೇಲ್ಮಟ್ಟದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಗಳ ನೇತೃತ್ವದಲ್ಲಿ ಒಂದು ಉನ್ನತ ಸಮಿತಿ ರಚಿಸಲು ಸಲಹೆ ನೀಡಿದೆ. ಜತೆಗೆ, ಉನ್ನತ ಹುದ್ದೆಗೇರುವವರೂ ಸಂದರ್ಶನ ಎದುರಿಸಬೇಕು ಎಂದು ಹೇಳಿದೆ.

ಕಾರ್ಯಾಲಯವು ವಿವಿಧ ನ್ಯಾಯಾಲಯ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರ ಪಟ್ಟಿ ಯೊಂದನ್ನು ತಯಾರಿಸಿ ಇವರಲ್ಲಿ ಜೇಷ್ಠತೆಗೆ ಅರ್ಹರಾದವರ ಮತ್ತೂಂದು ಪಟ್ಟಿಯನ್ನು ಕಾಲ ಕಾಲಕ್ಕೆ ತನ್ನ ಮೇಲಿರುವ ಉನ್ನತ ಸಮಿತಿಗೆ ಸಲ್ಲಿಸಬೇಕು. ಅಲ್ಲದೆ, ಈ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲೂ ಪ್ರಕಟಿಸಿ, ಆಕ್ಷೇಪಣೆ ಹಾಗೂ ಸಲಹೆಗಳ ಸಲ್ಲಿಕೆಗೆ ಕಾಲಾವಕಾಶ ನೀಡಬೇಕು. 

ಇತ್ತ, ಕಾರ್ಯಾಲಯದಿಂದ ಬಂದ ಪಟ್ಟಿಯ ಬಗ್ಗೆ ಉನ್ನತ ಸಮಿತಿಯು ಕೂಲಂಕಶ ಅಧ್ಯಯನ ಮಾಡಿ, ಪ್ರತಿ ವ್ಯಕ್ತಿಯ ಆವರೆಗಿನ ಸೇವಾವಧಿ, ವ್ಯಕ್ತಿತ್ವ, ಸಾರ್ವಜನಿಕ ಹಿತಾಸಕ್ತಿಗಳ ಪ್ರಕರಣಗಳನ್ನು ಮುನ್ನಡೆಸಿದ ರೀತಿ – ಇವೆಲ್ಲವನ್ನೂ ಮನದಟ್ಟು ಮಾಡಿಕೊಂಡು ಅರ್ಹರೆನಿಸಿದ ವಕೀಲರಿಗೆ ಜೇಷ್ಠತೆ ನೀಡಿ ಪಟ್ಟಿ ತಯಾರಿಸಬೇಕು. ಹೀಗೆ, ಉನ್ನತ ಸಮಿತಿಯು ಅಂತಿಮ ಗೊಳಿಸಿದ ಪಟ್ಟಿಯು ಮತ್ತೆ ಮುಕ್ತ ಕಲಾಪ ವೊಂದರಲ್ಲಿ (ಸುಪ್ರೀಂ ಕೋರ್ಟ್‌ಗೆ ಸಂಬಂಧ ಪಟ್ಟರೆ ಸುಪ್ರೀಂ ಕೋರ್ಟ್‌ನಲ್ಲಿ, ಹೈಕೋರ್ಟ್‌ ಗೆ ಸಂಬಂಧಪಟ್ಟರೆ ಹೈಕೋರ್ಟ್‌ ಕಲಾಪದಲ್ಲಿ) ಚರ್ಚೆಗೊಂಡ ಅನಂತರ ಪಟ್ಟಿಯಲ್ಲಿನ ಪ್ರತಿ ಯೊಬ್ಬ ವಕೀಲರ ಬಗ್ಗೆ ಸರ್ವಾನುಮತ ಅಥವಾ ಬಹುಮತದ ಆಧಾರದ ಮೇಲೆ ಜೇಷ್ಠತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next