Advertisement

ಆಮ್ರಪಾಲಿ ನೋಂದಣಿ ರದ್ದು

01:08 AM Jul 24, 2019 | Team Udayavani |

ಹೊಸದಿಲ್ಲಿ: ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಜತೆ ರಿಯಲ್‌ ಎಸ್ಟೇಟ್‌ ಕಂಪೆನಿ ಆಮ್ರಪಾಲಿ ಮಾಡಿಕೊಂಡಿದ್ದ ನೋಂದಣಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ರದ್ದು ಮಾಡಿದೆ. ಜತೆಗೆ ಆ ಸಂಸ್ಥೆ ಕೈಗೆತ್ತಿಕೊಂಡಿರುವ ಎಲ್ಲ ಕಟ್ಟಡ ನಿರ್ಮಾಣ ಯೋಜನೆಗಳ ಉಸ್ತುವಾರಿ ವಹಿಸಿ ಪೂರ್ತಿಗೊಳಿಸುವಂತೆ ರಾಷ್ಟ್ರೀಯ ಕಟ್ಟಡ ನಿರ್ಮಾಣ ಸಂಸ್ಥೆ (ಎನ್‌ಬಿಸಿಸಿ)ಗೆ ಆದೇಶ ನೀಡಿದೆ.

Advertisement

ನ್ಯಾಯಮೂರ್ತಿ ಅರುಣ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಯು.ಯು.ಲಲಿತ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಇದರ ಜತೆಗೆ ನೋಯ್ಡಾ ಮತ್ತು ಗ್ರೇಟರ್‌ ನೋಯ್ಡಾ ಪ್ರಾಧಿಕಾರ ನೀಡಿರುವ ಲೀಸ್‌ ಅನುಮತಿ ರದ್ದು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next