Advertisement
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟರ ಹಿತರಕ್ಷಣಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
Related Articles
Advertisement
ರೌಡಿಪಟ್ಟಿಯಿಂದ ಕೈಬಿಡಿ: ನಗರದ ಜಿಲ್ಲಾಸ್ಪತ್ರೆ ಮುಂಭಾಗದ ಮದ್ಯದಂಗಡಿ ತೆರವುಗೊಳಿಸಬೇಕು.ಉತ್ತಮ ಜೀವನ ನಡೆಸುವವರನ್ನು ರೌಡಿಪಟ್ಟಿ ಯಿಂದ ಕೈಬಿಡುವಂತೆ ಸಭೆಯಲ್ಲಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜೂಜು ಕೇಂದ್ರ ಹೆಚ್ಚಳ: ನಗರಸಭೆ ಮಾಜಿ ಸದಸ್ಯ ಸುರೇಶ್‌ನಾಯಕ ಮಾತನಾಡಿ, ಪಟ್ಟಣದ ವಿವಿಧೆಡೆ ಗಳಲ್ಲಿ ಜೂಜು ಕೇಂದ್ರಗಳು ಅವ್ಯಹತವಾಗಿ ನಡೆ ಯುತ್ತಿವೆ. ರಿಕ್ರಿಯೇಷನ್ ಕ್ಲಬ್‌ಗಳ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದಾರೆ. ಇದನ್ನು ತಕ್ಷಣವೇ ನಿಯಂ ತ್ರಿಸಬೇಕು, ನಗರದಲ್ಲಿ ಸಂಚಾರದಟ್ಟಣೆ ಅಧಿಕವಾಗಿದ್ದರೂ ಕೆಲ ಖಾಸಗಿ ಬಸ್‌ಗಳು, ಟೆಂಪೋಗಳಹಾವಳಿಯಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.
ಪೊಲೀಸರಿಗೆ ಸೂಚನೆ: ಇದಕ್ಕೆ ಉತ್ತರಿಸಿದ ಎಸ್ಪಿ, ಕ್ಲಬ್‌ಗಳಿಗೆ ಪರವಾನಗಿ ಇರುತ್ತದೆ. ಇಲ್ಲದ ಕ್ಲಬ್‌ಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೇಮುಂದಿನ ಕ್ರಮ ವಹಿಸಲಾಗುವುದು. ಉನ್ನುಳಿದಂತೆ ಖಾಸಗಿ ಬಸ್, ಟೆಂಪೋಗಳನ್ನು ಪಾರ್ಕಿಂಗ್‌ಸ್ಥಳದಲ್ಲಿಯೇ ನಿಲ್ಲಿಸುವಂತೆ ಸೂಚಿಸಲು ಪೊಲೀಸರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಚಾ.ಗು.ನಾಗರಾಜು ಮಾತನಾಡಿ, ಪೊಲೀಸ್
ಠಾಣೆಗಳಲ್ಲಿ ಎಫ್ಐಆರ್ ದಾಖಲಿಸುವಾಗ ಪ್ರಭಾವಿಗಳ ಹಿತರಕ್ಷಣೆಗಾಗಿ ಸತ್ಯಾಸತ್ಯತೆ ಮರೆಮಾಚಲಾಗುತ್ತಿದೆ. ಪ್ರಕರಣವನ್ನು ವೈಜ್ಞಾನಿಕವಾಗಿ, ಕೂಲಂಕಶವಾಗಿ ಪರಿಶೀಲನೆ ಮಾಡಿ ಎಫ್ಐಆರ್‌ದಾಖ ಲಸಬೇಕು. ಎಸ್.ಸಿ., ಎಸ್.ಟಿ ಬಡಾವಣೆಗಳಿಗೆ ಸಿ.ಸಿ.ಕ್ಯಾಮೆರಾ ಅಳವಡಿಸುವಂತೆ ಕೋರಿದರು.
ಎಎಸ್ಪಿ ಕೆ.ಎಸ್.ಸುಂದರರಾಜು, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಕೊಳ್ಳೇಗಾಲ ಡಿವೈಎಸ್‌ಪಿ ನಾಗರಾಜು, ಅಬಕಾರಿ ಆಯುಕ್ತ ಶ್ರೀನಿ ವಾಸ್, ಉಪಆಯುಕ್ತ ಮೋಹನ್ ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ಇತರರಿದ್ದರು.