ನವದೆಹಲಿ: ರಾಜ್ಯಸಭೆ ಚುನಾವಣೆಯಲ್ಲಿ “ನೋಟಾ’ (ಮೇಲಿನ ಯಾರೂ ಅಲ್ಲ) ಗುಂಡಿಯನ್ನು ಮತಯಂತ್ರದಲ್ಲಿ ಅಳವಡಿಸಲು ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿದ್ದು, ಮತಯಂತ್ರದಲ್ಲಿ ನೋಟಾ ಬಳಕೆಗೆ ತಡೆ ನೀಡಬೇಕೆಂದು ಕೋರಿದ್ದ ಕಾಂಗ್ರೆಸ್ ಪಕ್ಷದ ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದಾಗಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾದಂತಾಗಿದೆ.
ಚುನಾವಣೆಯಲ್ಲಿ “ನೋಟಾ’ (ಮೇಲಿನ ಯಾರೂ ಅಲ್ಲ) ಗುಂಡಿಯನ್ನು ಮತಯಂತ್ರದಲ್ಲಿ ಅಳವಡಿಸುವ ಕುರಿತು ಕಾಂಗ್ರೆಸ್ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿತ್ತು.
ಗುಜರಾತ್ ಕಾಂಗ್ರೆಸ್ ಶಾಸಕರು ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ, ತಮ್ಮ ವಕೀಲ ಕಪಿಲ್ ಸಿಬಲ್ ಅವರ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ಸಲ್ಲಿಕೆ ವೇಳೆ ವಾದ ಮಂಡಿಸಿದ ಸಿಬಲ್, ನೋಟಾ ಅಳವಡಿಕೆಗೆ ಕಾನೂನುಬದ್ಧ ಅವಕಾಶವಿಲ್ಲ ಎಂದಿದ್ದರು. ಆದರೆ ಸರ್ಕಾರಿ ಅಧಿಕಾರಿಗಳ ಪ್ರಕಾರ, 2014 ಜನವರಿಯಲ್ಲಿ ರಾಜ್ಯಸಭಾ ಚುನಾವಣೆ ನಡೆದಿದ್ದಾಗ ನೋಟಾ ಅಳವಡಿಸಲಾಗಿತ್ತು.