Advertisement

6 ತಿಂಗಳ ಗರ್ಭಿಣಿಗೆ ಗರ್ಭಪಾತಕ್ಕೆ ಸುಪ್ರೀಂ ಸಮ್ಮತಿ

03:45 AM Jan 17, 2017 | Team Udayavani |

ಹೊಸದಿಲ್ಲಿ: ಭಾರತದ ಸರ್ವೋಚ್ಚ ನ್ಯಾಯಾಲಯ ಸೋಮವಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಮುಂಬಯಿ ಮೂಲದ 24 ವಾರದ ಗರ್ಭಿಣಿಗೆ (6 ತಿಂಗಳು) ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.

Advertisement

ಭ್ರೂಣದ ತಲೆಬುರುಡೆ ಬೆಳೆದಿಲ್ಲದಿರುವುದರಿಂದ ಮಗು ಹುಟ್ಟಿದರೂ ಬದುಕುವುದಿಲ್ಲವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಮುಂಬಯಿ ಮೂಲದ 22 ವರ್ಷದ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳಲು ಸರ್ವೋಚ್ಚ  ನ್ಯಾಯಪೀಠಕ್ಕೆ ಈ ಹಿಂದೆ ಮನವಿ ಸಲ್ಲಿಸಿದ್ದರು. ಇದನ್ನು ನ್ಯಾಯಪೀಠ ಪರಿಗಣಿಸಿದೆ.

ಗರ್ಭಪಾತ ಕಾಯ್ದೆಯಡಿ ತನ್ನ ಜೀವವನ್ನುಳಿಸಿಕೊಳ್ಳುವ ಮಹಿಳೆಯ ಹಕ್ಕನ್ನು ಪರಿಗಣಿಸಿ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆಸ್ಪತ್ರೆಯ ವರದಿ ಪ್ರಕಾರ ಮಹಿಳೆ ಹೆರಿಗೆಯಾಗುವವರೆಗೆ ಕಾಯುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಮಗು ಗರ್ಭದಿಂದ ಹೊರಬಂದರೂ ತಲೆಬುರುಡೆಯಿಲ್ಲದೇ ಬದುಕುವುದು ಅಸಾಧ್ಯ ಎಂದು ನ್ಯಾಯ ಪೀಠ ತಿಳಿಸಿದೆ.

 20 ವಾರ ಮೇಲ್ಪಟ್ಟ ಭ್ರೂಣ ತೆಗೆಸಲು ಅವಕಾಶವಿಲ್ಲ. ಆದರೆ ತಾಯಿಯ ಜೀವಕ್ಕೇ ಕುತ್ತು ಬರುವುದಾದರೆ 20 ವಾರ ಮೇಲ್ಪಟ್ಟ ಭ್ರೂಣ ತೆಗೆಸಲು ಅದೇ ಕಾಯ್ದೆಯ ಸೆಕ್ಷನ್‌ 5ರಲ್ಲಿ ಅವಕಾಶವಿದೆ ಎಂದು 2016ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next