Advertisement

ಎಸ್‌ಬಿಆರ್‌ ಜ್ಞಾನ ದೇಗುಲವಾಗಿ ಬೆಳೆಯಲಿ

11:04 AM Nov 13, 2018 | |

ಕಲಬುರಗಿ: ಕಳೆದ 50 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಶರಣಬಸವೇಶ್ವರ ವಸತಿ ಶಾಲೆ ಜ್ಞಾನ ದೇಗುಲವಾಗಿ ಬೆಳೆಯಲಿ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಆಶಯ
ವ್ಯಕ್ತಪಡಿಸಿದರು.

Advertisement

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌) ಸುವರ್ಣ ಮಹೋತ್ಸವ ಹಾಗೂ ಶಾಲೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು
ಮಾತನಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವೇಶ್ವರ ವಸತಿ ಶಾಲೆಯನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಕಳೆದ 50 ವರ್ಷಗಳಲ್ಲಿ ಎಸ್‌ಬಿಆರ್‌ ಸಂಸ್ಥೆ ದೊಡ್ಡ ಸಾಧನೆ ಮಾಡಿದೆ. ಈ ಸಂಸ್ಥೆ ಬೆಳೆದು ಬಂದ ದಾರಿ ಮತ್ತು ಇಂದಿನ ಸುವರ್ಣ ಮಹೋತ್ಸವ ನನ್ನಲ್ಲಿ ರೋಮಾಂಚನ ಉಂಟು ಮಾಡಿದೆ. ಶರಣಬಸವೇಶ್ವರ ದೇವಸ್ಥಾನದಂತೆ ಎಸ್‌ಬಿಆರ್‌ ಶಾಲೆ ಜ್ಞಾನ ದೇಗುಲವಾಗಿ ಶಿಖರಕ್ಕೆ
ಬೆಳೆಯಲಿ ಎಂದು ಹೇಳಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ, ನುರಿತ ಶಿಕ್ಷಕ ವರ್ಗ ಹಾಗೂ ಹೊಸ ಆಲೋಚನೆ ಪಠ್ಯ ಕ್ರಮದಿಂದಾಗಿ ಎಸ್‌ ಬಿಆರ್‌ ಸಂಸ್ಥೆ ಶ್ರೇಷ್ಠ ಮಟ್ಟಕ್ಕೆ ಬೆಳೆದಿದೆ. ನೂರರ ಸಂಭ್ರಮವನ್ನು ಆಚರಿಸಲಿ ಎಂದ ಅವರು, ಡಾ| ಶರಣಬಸವಪ್ಪ ಅಪ್ಪ ಅವರು ಈಗ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದಾರೆ. ಎಸ್‌ಬಿಆರ್‌ ಶಾಲೆಯಂತೆ ಶ್ರೇಷ್ಠ ಉಪನ್ಯಾಸಕರ ಮೂಲಕ ವಿಶ್ವವಿದ್ಯಾಲಯ
ಶ್ರೇಷ್ಠ ಮಟ್ಟಕ್ಕೆ ಬೆಳೆಯಲಿ. ವಿಶ್ವವಿದ್ಯಾಲಯ ವಿಶ್ವ ಮಟ್ಟದಲ್ಲಿ ಬೆಳೆಸಬೇಕು ಎಂಬ ಅಪ್ಪ ಕಂಡಿರುವ ಕನಸ್ಸು, ಆಲೋಚನೆ ಮತ್ತು ಅವರಲ್ಲಿನ ಉತ್ಸಾಹ ನಿಜಕ್ಕೂ ಮಾದರಿ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಅನಿಲಕುಮಾರ ಬಿಡವೆ ಮಾತನಾಡಿ, ಎಸ್‌ಬಿಆರ್‌ ಶಾಲೆ ಗುಟ್ಟಮಟ್ಟದ ಶಿಕ್ಷಣದ ಮೂಲಕ ಪ್ರಸಿದ್ಧಿ ಪಡೆದಿದೆ. ವಿದ್ಯಾರ್ಥಿಗಳಿಗೆ ಯಾವ ರೀತಿಯ ಗುಣ ಮಟ್ಟದ ಶಿಕ್ಷಣ ನೀಡಬೇಕು ಎಂಬುದನ್ನು ಎಸ್‌ಬಿಆರ್‌
ಶಾಲೆ ಮೂಲಕ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಶರಣಬಸವಪ್ಪ ಅಪ್ಪ ಮತ್ತು ಶಾಲೆ ಪ್ರಾಂಶುಪಾಲರಾದ ಎನ್‌.ಎಸ್‌.ದೇವರಕಲ್‌ ಅವರು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

Advertisement

ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ತೀರ ಕಡಿಮೆ ಇದೆ. ತಮಿಳುನಾಡಿನಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

ಆದರೆ, ರಾಜ್ಯದಲ್ಲಿ ಕೇವಲ ಶೇ.18ರಷ್ಟು ವಿದ್ಯಾರ್ಥಿಗಳು ಮಾತ್ರವೇ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ಎಸ್‌ಬಿಆರ್‌
ಸಂಸ್ಥೆಯಲ್ಲಿ ಕಲಿತ ಶೇ.85ರಷ್ಟು ವಿದ್ಯಾರ್ಥಿಗಳು ಸ್ನಾತಕೋತರ ಮಟ್ಟದಲ್ಲಿ ಓದುತ್ತಿದ್ದಾರೆ. ಇದಕ್ಕೆ ಎಸ್‌ಬಿಆರ್‌ನಲ್ಲಿ ಸಿಗುತ್ತಿರುವ ಗುಣ ಮಟ್ಟದ ಶಿಕ್ಷಣವೇ ಕಾರಣ ಎಂದು ಹೇಳಿದರು. 

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಠಿ, ಶರಣಬಸವ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ| ಶಿವದತ್ತ ಹೊನ್ನಳ್ಳಿ, ಎಸ್‌ಬಿಆರ್‌ ಪ್ರಾಚಾರ್ಯ ಎನ್‌.ಎಸ್‌. ದೇವರಕಲ್‌,
ಎಸ್‌ಬಿಆರ್‌ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ| ಭರತ ಕೋಣಿನ್‌, ಪ್ರಧಾನ ಕಾರ್ಯದರ್ಶಿ ದಿನೇಶ ಪಾಟೀಲ, ಸಂಘದ ಪೋಷಕ ಸದಸ್ಯ ದೊಡ್ಡಪ್ಪ ನಿಷ್ಠಿ, ಸಂತೋಷ ಬಿಲಗುಂದಿ ಇದ್ದರು.

ಶಿಕ್ಷಣಕ್ಕೆ ಮಠಗಳ ಕೊಡುಗೆ ಹೆಚ್ಚು ರಾಜ್ಯದಲ್ಲಿ 50 ವರ್ಷಗಳ ಹಿಂದೆ ಕಡಿಮೆ ಶಿಕ್ಷಣ ಸಂಸ್ಥೆಗಳು ಇದ್ದವು. ಇಂತಹ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನ, ತುಮಕೂರು ಮಠ, ಸುತ್ತೂರು ಮಠ ಹಾಗೂ ಧಾರವಾಡದ ಮುರುಘಾ ಮಠಗಳು ಅನ್ನ ದಾಸೋಹದೊಂದಿಗೆ ಜ್ಞಾನ ದಾಸೋಹ ಆರಂಭಿಸಿದವು. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರಕ್ಕಿಂತ ಮಠಗಳು ಶೈಕ್ಷಣಿಕ
ಮಟ್ಟ ಹೆಚ್ಚಿಸಲು ದೊಡ್ಡ ಕೊಡುಗೆ ನೀಡಿದವು. 
ಪ್ರೊ| ಎಚ್‌.ಎಂ. ಮಹೇಶ್ವರಯ್ಯ, ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next