Advertisement

SBI ನಿವ್ವಳ ಲಾಭ ಶೇ.35 ಕುಸಿತ

01:14 AM Feb 04, 2024 | |

ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ (ಎಸ್‌ಬಿಐ) 3ನೇ ತ್ತೈಮಾಸಿಕದ ಆರ್ಥಿಕ ವರದಿ ಪ್ರಕಟಗೊಂಡಿದ್ದು, ಎಸ್‌ಬಿಐನ ನಿವ್ವಳ ಲಾಭದಲ್ಲಿ ಶೇ.35ರಷ್ಟು ಕುಸಿತ ದಾಖಲಾಗಿದೆ. ಇದರೊಂದಿಗೆ ಸಂಸ್ಥೆಯ ಲಾಭ 9,164 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಎಸ್‌ಬಿಐನ ನಿವ್ವಳ ಲಾಭವು 14,205 ಕೋಟಿ ರೂ.ಗಳಾಗಿತ್ತು. ಪಿಂಚಣಿ ಮತ್ತು ವೇತನ ಹಿಂಬಾಕಿ ಪಾವತಿಗಾಗಿ 7,100 ಕೋಟಿ ರೂ.ಗಳು ವೆಚ್ಚವಾಗಿರುವ ಹಿನ್ನೆಲೆಯಲ್ಲಿ ನಿವ್ವಳ ಲಾಭ ಕಡಿಮೆಯಾಗಿದೆ. ಇಲ್ಲದಿದ್ದಲ್ಲಿ ನಿವ್ವಳ ಲಾಭ 16,264 ಕೋಟಿ ರೂ.ಗಳಾಗಿರುತ್ತಿತ್ತು ಎಂದು ಎಸ್‌ಬಿಐ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next