ಮುಂಬಯಿ : ಈ ವರ್ಷ ಮಾರ್ಚ್ 31ಕ್ಕೆ ಕೊನೆಗೊಂಡ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) 1 ಲಕ್ಷ ಕೋಟಿ ರೂ ಮೀರಿದ ಸಾಲಗಳನ್ನು ರೈಟ್ ಆಫ್ ಮಾಡಿದೆ.
ಈ ವರ್ಷ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ 61,663 ಕೋಟಿ ರೂ. ಮತ್ತು ಹಿಂದಿನ ಹಣಕಾಸು ವರ್ಷದಲ್ಲಿ 40,809 ಕೋಟಿ ರೂ. ಸಾಲ ಸೇರಿದಂತೆ ಒಟ್ಟು 1.02 ಲಕ್ಷ ಕೋಟಿ ರೂ ಸಾಲವನ್ನು ಎಸ್‌ಬಿಐ ರೈಟ್ ಆಫ್ ಮಾಡಿದೆ.
ಇದಕ್ಕೂ ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ರೈಟ್ ಆಫ್ ಮಾಡಲಾದ ಒಟ್ಟು 57,646 ಕೋಟಿ ರೂ. ಸಾಲ ಮೊತ್ತದ ಬಹುತೇಕ ದುಪ್ಪಟ್ಟ ಮೊತ್ತ ಇದಾಗಿರುವುದು ಗಮನಾರ್ಹವಾಗಿದೆ.
2019ರಲ್ಲಿ 1.02 ಲಕ್ಷ ಕೋಟಿ ರೂ. ಸಾಲ ರೈಟ್ ಆಫ್ ಮಾಡಿದ ಕಾರಣ ಈಗ ಎಸ್‌ಬಿಐ ನ ಎನ್‌ಪಿಎ (ನಾನ್ ಪರ್ಫಾಮಿಂಗ್ ಅಸೆಟ್ = ಅನುತ್ಪಾದಕ ಆಸ್ತಿ) ಪ್ರಮಾಣ ಶೇ.23ಕ್ಕೆ ಇಳಿದಿದ್ದು ಅದೀಗ 1.72 ಲಕ್ಷ ಕೋಟಿ ರೂ. ಪ್ರಮಾಣದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ರಜನೀಶ್ ಕುಮಾರ್ ಅವರು ಬ್ಯಾಂಕಿನ 2019ರ ಸಾಲಿನ ಫಲಿತಾಂಶ ಪ್ರಕಟಿಸಿದ ಬಳಿಕ ತಿಳಿಸಿದರು.
ಇದೇ ವೇಳೆ 2019ರ ಸಾಲಿನಲ್ಲಿ ಸಾಲ ವಸೂಲಾತಿ ಮತುತ ಸಾಲ ಸುಧಾರಣೆ (ಬಡ್ಡಿ ಬಾಕಿ ಪಾವತಿಸಲು ತೊಡಗಿರುವ ಸಾಲ ಖಾತೆಗಳು) 31,512 ಕೋಟಿ ರೂ. ಗೆ ತಲುಪಿದೆ.
ಇದರ ಅರ್ಥ ರೈಟ್ ಆಫ್ ಮಾಡಲಾದ ಸಾಲದ ಪ್ರಮಾಣಕ್ಕೆ ಅನುಗುಣವಾಗಿ ಸಾಲ ವಸೂಲಾತಿ ಮತ್ತು ಮೇಲ್ಮಟ್ಟಕ್ಕೆ ಏರಿಸುವ ಪ್ರಕ್ರಿಯೆಗಳು ಇದೇ ಅವಧಿಯಲ್ಲಿ ಉತ್ತಮ ಸುಧಾರಣೆಯನ್ನು ಕಂಡಿವೆ. 2017ರ ಮಾರ್ಚ್ 31ಕ್ಕೆ ಕೊನೆಗೊಂಡ ಮೂರು ವರ್ಷಗಳ ಅವಧಯಲ್ಲಿ ಸಾಲ ವಸೂಲಾತಿ 28,632 ಕೋಟಿ ರೂ. ಆಗಿದೆ. ಈ ವರ್ಷ ಮಾರ್ಚ್ 31ಕ್ಕೆ ಕೊನೆಗೊಂಡ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇದು 45,429 ಕೋಟಿ ರೂ. ಆಗಿದೆ ಎಂದವರು ಹೇಳಿದರು.