Advertisement

ಎಸಿºಐ ನೆಫ್ಟ್, ಆರ್ಟಿಜಿಎಸ್‌ ಶುಲ್ಕ ಶೇ.75 ಇಳಿಕೆ

03:55 AM Jul 14, 2017 | Team Udayavani |

ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಡಿಜಿಟಲ್‌ ಪಾವತಿ ಉತ್ತೇಜಿಸುವ ನಿಟ್ಟಿನಲ್ಲಿ ನೆಫ್ಟ್ ಮತ್ತು ಆರ್‌ಟಿಜಿಎಸ್‌ ಶುಲ್ಕಗಳಲ್ಲಿ ಶೇ.75ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಇದರಿಂದ 5.27 ಕೋಟಿ ಗ್ರಾಹಕರಿಗೆ ಅನುಕೂಲವಾಗ ಲಿದೆೆ. ‘ಶುಲ್ಕ ಇಳಿಕೆ ಶನಿವಾರದಿಂದಲೇ ಜಾರಿಗೆ ಬರಲಿದ್ದು, ಇಂಟರ್ನೆಟ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ನಡೆಸುವ ವಹಿವಾಟುಗಳಿಗೆ ಅನ್ವಯಿಸಲಿದೆ’ ಎಂದು ಬ್ಯಾಂಕ್‌ ತಿಳಿಸಿದೆ. ನೆಫ್ಟ್ ಮೂಲಕ ನಡೆಸುವ 10,000 ರೂ.ವರೆಗೆ ಹಣ ವರ್ಗಾವಣೆಗೆ 1 ರೂ., 1 ಲಕ್ಷ ರೂ.ವರೆಗಿನ ವರ್ಗಾವಣೆಗೆ 2 ರೂ. ಶುಲ್ಕ ನಿಗದಿಯಾಗಿದೆ. ಈ ಮೊದಲು 1 ಲಕ್ಷದಿಂದ 2 ಲಕ್ಷ ರೂ.ವರೆಗಿನ ವರ್ಗಾವಣೆಗೆ ಇದ್ದ 12 ರೂ. ಶುಲ್ಕವನ್ನು 3 ರೂ.ಗೆ, 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ಇದ್ದ 20 ರೂ. ಶುಲ್ಕ 5 ರೂ.ಗೆ ಇಳಿಯಲಿದೆ.

Advertisement

ಡಿಜಿಟಲ್‌ ಪಾವತಿ ಪ್ರಗತಿ: ನೋಟು ಅಮಾನ್ಯದ ನಂತರ ನಗದುರಹಿತ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಕೈಗೊಂಡ ಕ್ರಮಗಳಿಂದ ಡಿಜಿಟಲ್‌ ಪಾವತಿ ಕ್ರಾಂತಿಯಾಗಿದ್ದು, 7 ತಿಂಗಳಲ್ಲಿ ಡಿಜಿಟಲ್‌ ಪಾವತಿ ಮೂಲಕ 70,000 ಕೋಟಿ ರೂ. ಮೌಲ್ಯದ ವಹಿವಾಟು ನಡೆದಿದೆ ಎಂದು ಎಸ್‌ಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next