Advertisement

ಎಸ್ ಬಿಐ ನೇಮಕಾತಿ: 5000 ಹುದ್ದೆಗಳಿಗೆ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ ?

06:05 PM Sep 22, 2022 | Vishnudas Patil |

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5000 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸೆಪ್ಟೆಂಬರ್ 27 ರವರೆಗೆ ಅಧಿಕೃತ ಎಸ್‌ಬಿಐ ವೆಬ್‌ಸೈಟ್ – sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು.

Advertisement

ಅಧಿಕೃತ ಅಧಿಸೂಚನೆಯ ಪ್ರಕಾರ ಪೂರ್ವಭಾವಿ ಪರೀಕ್ಷೆಯನ್ನು ನವೆಂಬರ್ ನ ಲ್ಲಿ ತಾತ್ಕಾಲಿಕವಾಗಿ ನಡೆಸಲಾಗುತ್ತದೆ. ಬಳಿಕ ಮುಖ್ಯ ಪರೀಕ್ಷೆಯನ್ನು ಡಿಸೆಂಬರ್ ಅಥವಾ 2023 ರ ಜನವರಿಯಲ್ಲಿ  ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ?

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಹೋಗಿ – sbi.co.in.

ಹಂತ 2: ಹೋಂ ಪೇಜ್ ನಲ್ಲಿರುವ ಪ್ರದರ್ಶಿಸಲಾದ NEW REGISTRATION ಬಟನ್ ಮೇಲೆ ಟ್ಯಾಪ್ ಮಾಡಿ.

Advertisement

ಹಂತ 3: ನಿಮ್ಮ ಮೂಲ ವಿವರಗಳಾದ ಹೆಸರು, ಸಂಪರ್ಕ ಸಂಖ್ಯೆ, ಇಮೇಲ್ ಐಡಿ, ವಿಳಾಸ ಇತ್ಯಾದಿಗಳನ್ನು ನಮೂದಿಸಿ ಮತ್ತು ಸೇವ್ ಬಟನ್ ಮೇಲೆ ಟ್ಯಾಪ್ ಮಾಡಿ.

ಹಂತ 4: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು submit ಒತ್ತಿರಿ.

ಹಂತ 5: ನಿಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಯ ವಿವರಗಳನ್ನು ಭರ್ತಿ ಮಾಡಿ.

ಹಂತ 6: ಅಂತಿಮ ಸಲ್ಲಿಕೆಗೆ ಮೊದಲು ಸಂಪೂರ್ಣ ಅಪ್ಲಿಕೇಶನ್ ಅನ್ನು ಪರಿಶೀಲಿಸಲು  final submission ಟ್ಯಾಬ್ ಅನ್ನು ಟ್ಯಾಪ್ ಮಾಡಿ.

ಹಂತ 7: ಒಮ್ಮೆ ಪರಿಶೀಲಿಸಿದ ನಂತರ, ಅಂತಿಮ ಸಲ್ಲಿಸುವ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಶುಲ್ಕವನ್ನು ಡೆಪಾಸಿಟ್ ಮಾಡಲು ಪಾವತಿ payment tab ಮೇಲೆ ಕ್ಲಿಕ್ ಮಾಡಿ.

ಹಂತ 8: ಶುಲ್ಕವನ್ನು ಡೆಪಾಸಿಟ್ ಮಾಡಿದ ನಂತರ  submit ಒತ್ತಿರಿ.

ಹಂತ 9: ಹೆಚ್ಚಿನ ಬಳಕೆಗಾಗಿ ನಿಮ್ಮ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next