Advertisement

ಎಸ್‌ಬಿಐ ಉಳಿತಾಯ ಖಾತೆ ಕನಿಷ್ಠ ಮೊತ್ತದ ಮಿತಿ ಇಳಿಕೆ?

08:35 AM Jan 06, 2018 | Team Udayavani |

ಮುಂಬಯಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿ ಇರಿಸಬೇಕಾದ ಕನಿಷ್ಠ ಮೊತ್ತ ಇಳಿಕೆಗೆ ಚಿಂತನೆ ಮಾಡಿದೆ. ಇದಲ್ಲದೆ ಕನಿಷ್ಠ ಮೊತ್ತ ಇರದೇ ಇದ್ದರೆ ವಿಧಿಸುವ ದಂಡದ ಪ್ರಮಾಣವೂ ಇಳಿಕೆಯಾಗಲಿದೆ. ಕನಿಷ್ಠ ಮೊತ್ತ ಕಾಯ್ದುಕೊಂಡು ಬರದೇ ಇದ್ದವರಿಗೆ ದಂಡ ವಿಧಿಸಿಯೇ 1,771 ಕೋಟಿ ರೂ.ಗಳನ್ನು ಎಸ್‌ಬಿಐ ಸಂಗ್ರಹಿಸಿದೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ ಕನಿಷ್ಠ ಮೊತ್ತದ ಮಿತಿಯನ್ನು ಕಡಿತಗೊಳಿಸುವಂತೆ ಬ್ಯಾಂಕ್‌ಗೆ ಸೂಚಿಸಿದೆ.

Advertisement

ಮೂಲಗಳ ಪ್ರಕಾರ ಉಳಿತಾಯ ಖಾತೆಯಲ್ಲಿ ಕನಿಷ್ಠ 1 ಸಾವಿರ ರೂ. ಇದ್ದರೆ ಮಾತ್ರ ಸಾಕು ಎಂಬ ನಿಯಮ ಮತ್ತೆ ಜಾರಿಗೆ ಬರುವ ಸಾಧ್ಯತೆಗಳಿವೆ.  ಸದ್ಯ ಮೆಟ್ರೋ ನಗರಗಳ ವ್ಯಾಪ್ತಿಯಲ್ಲಿ 3 ಸಾವಿರ ರೂ., ಅರೆ ನಗರ ಮಿತಿಯಲ್ಲಿ 2 ಸಾವಿರ ರೂ., ಗ್ರಾಮೀಣ ಪ್ರದೇಶದಲ್ಲಿ 1 ಸಾವಿರ ರೂ. ಮೊತ್ತದ ಮಿತಿ ಹೇರಲಾಗಿದೆ.

2017ರ ಎಪ್ರಿಲ್‌ನಲ್ಲಿ ಐದು ವರ್ಷಗಳ ಬಳಿಕ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ 5 ಸಾವಿರ ರೂ. ಇರಬೇಕು ಎಂದು ಬ್ಯಾಂಕ್‌ ಆದೇಶಿಸಿತ್ತು. ದೇಶಾದ್ಯಂತ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ್ದರಿಂದ ಅದನ್ನು 3 ಸಾವಿರ ರೂ.ಗೆ ಇಳಿಕೆ ಮಾಡಲಾಯಿತು. 

ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದು ಕೊಳ್ಳದೇ ಇದ್ದರೆ 20 ರೂ.ಗಳಿಂದ 40 ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ. ಅದಕ್ಕೆ ಪ್ರತ್ಯೇಕ ತೆರಿಗೆಯನ್ನೂ ಪಾವತಿಸಬೇಕು. ಐಸಿಐಸಿಐ, ಎಚ್‌ಡಿಎಫ್ಸಿ ಬ್ಯಾಂಕ್‌, ಕೋಟಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ಗಳಲ್ಲಿ ಮೆಟ್ರೋ ನಗರಗಳ ಖಾತೆದಾರರು ಕನಿಷ್ಠ 10 ಸಾವಿರ ರೂ. ಇರಿಸಿಕೊಳ್ಳಬೇಕೆಂಬ ನಿಯಮವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next