Advertisement

ಎಸ್‌ಬಿಐ ಕನಿಷ್ಠ ಬ್ಯಾಲೆನ್ಸ್‌: 3 ವಿಧದ ಖಾತೆಗಳಿಗೆ ವಿನಾಯ್ತಿ

03:50 AM Apr 15, 2017 | |

ಹೊಸದಿಲ್ಲಿ: ಬ್ಯಾಂಕ್‌ ಖಾತೆಯಲ್ಲಿ ಮಾಸಿಕ ಇಂತಿಷ್ಟು ಕನಿಷ್ಠ ಮೊತ್ತ ಇರಲೇಬೇಕು ಎಂದು ಹೊಸ ಆದೇಶ ಹೊರಡಿಸಿ ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಭಾರತೀಯ ಸ್ಟೇಟ್‌ಬ್ಯಾಂಕ್‌(ಎಸ್‌ಬಿಐ) ಇದೀಗ ಕೆಲವು ಖಾತೆಗಳಿಗೆ ಇದರಿಂದ ವಿನಾಯಿತಿ ನೀಡಿರುವುದರ ಕುರಿತು ಮಾಹಿತಿ ನೀಡಿದೆ.

Advertisement

ಸಣ್ಣ ಉಳಿತಾಯ ಖಾತೆ, ಮೂಲ ಉಳಿತಾಯ ಖಾತೆ ಹಾಗೂ ಜನಧನ ಖಾತೆಯಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ಇಟ್ಟುಕೊಳ್ಳಬೇಕಾಗಿ ಇಲ್ಲ ಎಂದು ಎಸ್‌ಬಿಐ ಟ್ವೀಟ್‌ ಮಾಡಿದೆ. ಇದರ ಜೊತೆಗೆ, ಕಾರ್ಪೊರೇಟ್‌ ವೇತನ ಖಾತೆಗೂ ಕನಿಷ್ಠ ಮೊತ್ತದಿಂದ ವಿನಾಯಿತಿ ನೀಡಲಾಗಿದೆ. 6 ಮೆಟ್ರೋಗಳಲ್ಲಿ ಏ.1ರಿಂದ ಅನ್ವಯವಾಗುವಂತೆ ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ 5 ಸಾವಿರ ಮೊತ್ತ ಇರಲೇಬೇಕು ಎಂದು ಎಸ್‌ಬಿಐ ಹೇಳಿತ್ತು. ಇರದಿದ್ದರೆ ಅದಕ್ಕೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next