Advertisement

ಎಸ್‌ಬಿಐ ಗೃಹ ಸಾಲ ಉತ್ಸವ ಯಶಸ್ವಿ

06:26 AM Jul 02, 2019 | Team Udayavani |

ಬೆಂಗಳೂರು: ನಗರದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸ್ಥಳೀಯ ಕೇಂದ್ರ ಕಚೇರಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಗೃಹ ಸಾಲ ಉತ್ಸವ ಭರ್ಜರಿ ಯಶಸ್ಸು ಕಂಡಿದೆ.

Advertisement

ಗೃಹ ಸಾಲ ಉತ್ಸವವನ್ನು ಬ್ಯಾಂಕಿನ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಭಿಜಿತ್‌ ಮಜೂಂದಾರ್‌ ಅವರು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಮಾರುಕಟ್ಟೆಯಲ್ಲಿ ಗೃಹ ಸಾಲ ಪಡೆಯುವವರ ಪೈಕಿ ಶೇ.50ಕ್ಕೂ ಹೆಚ್ಚು ಮಂದಿ 35 ವರ್ಷ ವಯಸ್ಸಿಗಿಂತ ಕೆಳಗಿನವರು ಇದ್ದಾರೆ ಎಂದು ಅಂದಾಜಿಸಲಾಗಿದೆ.

ಎಸ್‌ಬಿಐ ಗೃಹ ಸಾಲ ನೀಡಿಕೆಯಲ್ಲಿ ದೇಶದಲ್ಲಿ ಅಗ್ರ ಸ್ಥಾನ ಪಡೆದಿದೆ. ಇತ್ತೀಚೆಗೆ ಬಹುಸಂಖ್ಯೆಯ ವಸತಿ ಯೋಜನೆಗಳು ರೂಪ ತಾಳುತ್ತಿರುವುದರೊಂದಿಗೆ ಸಾರ್ವಜನಿಕರಿಗೆ ಮನೆಗಳು ಸುಲಭ ದರದಲ್ಲಿ ದೊರಕುತ್ತಿವೆ. ಇಂದು ದೇಶದ ಎಲ್ಲ ಶೆಡ್ನೂಲ್ಡ್‌ ವಾಣಿಜ್ಯ ಬ್ಯಾಂಕುಗಳು ನೀಡಿರುವ ಒಟ್ಟು ಗೃಹ ಸಾಲದ ಪ್ರತಿಶತ 34.51ರಷ್ಟು ಎಸ್‌ಬಿಐ ನೀಡಿದೆ ಎಂದರು.

ಈ ಉತ್ಸವದಲ್ಲಿ 40 ಡೆವಲಪರ್‌ಗಳು 200ಕ್ಕೂ ಅಧಿಕ ಪ್ರಾಜೆಕ್ಟ್ಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಗೃಹ ಖರೀದಿ ಮಾಡಿದವರಿಗೆ ಗೃಹ ಸಾಲ ಸ್ಥಳದಲ್ಲೇ ಮಂಜೂರು ಮಾಡಿದ್ದಲ್ಲದೆ, ಶೇ.0.15ರಷ್ಟು ಬಡ್ಡಿ ರಿಯಾಯಿತಿ ನೀಡಲಾಗಿದೆ. ಜತೆಯಲ್ಲಿ ಪ್ರೊಸೆಸ್ಸಿಂಗ್‌ ಫೀ ಶೇ.100 ಮನ್ನಾ, ಯಾವುದೇ ಕಾನೂನು ಶುಲ್ಕವಾಗಲಿ ಮೌಲ್ಯಮಾಪನ ಶುಲ್ಕವಾಗಲಿ ವಿಧಿಸಲಾಗಿಲ್ಲ.

ಈಗಾಗಲೇ ಗೃಹ ಸಾಲದಲ್ಲಿ ಇರುವವರಿಗೆ ನೂತನ ರೆಪೋ ದರಕ್ಕೆ ಬದಲಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು. ಎಸ್‌ಬಿಐ ಮ್ಯಾಕ್ಸ್‌ಗೆನ್‌, ಎಸ್‌ಬಿಐ ಪ್ರಿವಿಲೇಜ್‌ ಮತ್ತು ಶೌರ್ಯ ಹಾಗೂ ಟಾಪ್‌ ಅಪ್‌ ಸಾಲ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಸ್‌ಬಿಐ ವ್ಯವಸ್ಥಾಪಕರಾದ ವಿನ್ಸೆಂಟ್‌ ಎಂ.ದೇವಸ್ಸಿ, ಮುರಳೀಧರನ್‌ .ಎಸ್‌, ಮಂಜು ಎಸ್‌. ಬೋಲಾಕಾನಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next