Advertisement

SBIನ ಯಾವುದೇ ಶಾಖೆಯಲ್ಲೂ ದಿನಕ್ಕೆ ಇಷ್ಟು ಹಣವನ್ನು ತೆಗೆಯಬಹುದು..!

03:08 PM May 30, 2021 | Team Udayavani |

ನವ ದೆಹಲಿ : ದೇಶದ ಅತ್ಯಂತ ದೊಡ್ಡ ನಾಗರಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ ಹೊರಡಿಸಿದೆ.

Advertisement

ಖಾತೆಯಲ್ಲಿನ ಹಣ ವಿಥ್ ಡ್ರಾ ಮಾಡುವ ಹೊಸ ನಿಯಮಗಳ ಬಗ್ಗೆ ಹೇಳಲಾಗಿದ್ದು, ಹೋಂ ಬ್ರಾಂಚ್ ಅಥವಾ ಪ್ರಧಾನ ಶಾಖೆ ಬಿಟ್ಟು ಬೇರೆ ಶಾಖೆಗಳಲ್ಲಿ ಹಣ ವಿಥ್ ಡ್ರಾ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ : ಕೋವಿಡ್ 19 : ದೇಶೀಯ ವಿಮಾನಯಾನ ಇನ್ಮುಂದೆ ದುಬಾರಿ..!

ಈ ಬಗ್ಗೆ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ತನ್ನ ಗ್ರಾಹಕರಿಗೆ ಮಾಹಿತಿ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋವಿಡ್ ಸೋಂಕಿನ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೆಕ್ ಅಥವಾ ಸ್ಲಿಪ್ ಮೂಲಕ ಇತರೆ ಶಾಖೆಗಳಲ್ಲಿ ಹಣ ವಿಥ್ ಡ್ರಾ ಮಾಡುವುದಕ್ಕೆ ಇದ್ದ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಗ್ರಾಹಕರು ಯಾವುದೇ ಎಸ್ ಬಿ ಐ  ಶಾಖೆಯಲ್ಲಿ ದಿನವೊಂದಕ್ಕೆ ಉಳಿತಾಯ ಖಾತೆಯಿಂದ 25,000 ರೂಪಾಯಿಗಳನ್ನು ವಿಥ್ ಡ್ರಾ ಮಾಡಬಹುದಾಗಿದೆ.

Advertisement


ಇನ್ನು, ಚೆಕ್ ಮೂಲಕ ಹಣ ವಿತ್ ಡ್ರಾ ಮಾಡುವ ಮಿತಿ 1 ಲಕ್ಷ ರೂಪಾಯಿವರೆಗೆ ಇರಲಿದ್ದು, ಥರ್ಡ್ ಪಾರ್ಟಿಗೆ ಚೆಕ್ ಮೂಲಕ ಹಣ ವಿಥ್ ಡ್ರಾ ಮಾಡುವ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಈ ಹೊಸ ಅಧಿಸೂಚನೆಯ ಪ್ರಕಾರ, ಹೊಸ ನಿಯಮಗಳು ತಕ್ಷಣದಿಂದ ಜಾರಿಗೆ ತರಲಾಗಿದೆ. ಈ ನಿಯಮಗಳು ಸೆಪ್ಟೆಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.

ಇದನ್ನೂ ಓದಿ : ತೆಂಕಿಲ : ಮಹಿಳೆಯೋರ್ವರ ಕರಿಮಣಿ ಸರ ಎಳೆದು ಬೈಕ್ ನಲ್ಲಿ ಪರಾರಿಯಾದ ಅಪರಿಚಿತರು

Advertisement

Udayavani is now on Telegram. Click here to join our channel and stay updated with the latest news.

Next