Advertisement

ದಿನಕ್ಕೆ ಕೇವಲ 20 ಸಾವಿರ ರೂ. ಡ್ರಾ!

06:00 AM Oct 02, 2018 | Team Udayavani |

ಮುಂಬಯಿ: ಭಾರೀ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ಎಟಿಎಂಗೆ ಹೋದರೆ ನಿರಾಸೆ ಖಂಡಿತ. ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಮಿತಿಯನ್ನು ಅರ್ಧಕ್ಕೆ ಇಳಿಸಿದ್ದು, ಇನ್ನು ಮುಂದೆ ದಿನಕ್ಕೆ ಕೇವಲ 20 ಸಾವಿರ ರೂ.ಗಳನ್ನಷ್ಟೇ ತೆಗೆಯಬಹುದಾಗಿದೆ. ಅ. 31ರಿಂದಲೇ ಹೊಸ ನಿಯಮ ಜಾರಿಯಾಗಲಿದೆ.

Advertisement

ಹಬ್ಬದ ಋತು ಆರಂಭವಾದ ಹೊತ್ತಲ್ಲೇ ಬ್ಯಾಂಕ್‌ ಈ ನಿರ್ಧಾರ ಕೈಗೊಂಡಿದೆ. ಇದು ವರೆಗೆ ದಿನಕ್ಕೆ 40 ಸಾವಿರ ರೂ.ಗಳನ್ನು ಪ್ರತಿ ಎಟಿಎಂ ಕಾರ್ಡ್‌ನಿಂದ ತೆಗೆಯಬಹುದಿತ್ತು. ಸದ್ಯಕ್ಕೆ ಇದು ಬ್ಯಾಂಕಿನ ಕ್ಲಾಸಿಕ್‌ ಮತ್ತು ಮೆಸ್ಟ್ರೋ ಕಾರ್ಡ್‌ಗಳಿಗೆ ಅನ್ವಯವಾಗುತ್ತದೆ.

“ಇತ್ತೀಚಿನ ದಿನಗಳಲ್ಲಿ ಎಟಿಎಂ ವಿತ್‌ಡ್ರಾ ವೇಳೆ ಆಗುತ್ತಿರುವ ವಂಚನೆ ಸಂಬಂಧಿತ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ಗೆ ಪ್ರೋತ್ಸಾಹ ನೀಡುವ ಸಲುವಾಗಿ ವಿತ್‌ಡ್ರಾ ಮಿತಿಯನ್ನು 20 ಸಾವಿರ ರೂ.ಗಳಿಗೆ ಇಳಿಕೆ ಮಾಡಿದ್ದೇವೆ’ ಎಂದು ಬ್ಯಾಂಕ್‌ ಹೇಳಿಕೆ ನೀಡಿದೆ. ಬ್ಯಾಂಕಿನ ನಿಯಮಾವಳಿಗಳಂತೆ ಈ ನಿರ್ಧಾರಕ್ಕೆ ಬಂದಿ ದ್ದೇವೆ ಎಂದು ಎಲ್ಲ ಗ್ರಾಹಕರಿಗೆ ಮಾಹಿತಿ ನೀಡುವಂತೆ ಬ್ರ್ಯಾಂಚ್‌ಗಳಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next