Advertisement

Supreme Court; ಪಕ್ಷಗಳ ದೇಣಿಗೆ ರಹಸ್ಯ ಚುನಾವಣ ಆಯೋಗದ ಕೈಗೆ

01:23 AM Mar 13, 2024 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಆದೇಶದಂತೆ ಚುನಾವಣ ಬಾಂಡ್‌ಗಳ ಮಾಹಿತಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಮಂಗಳವಾರ ಚುನಾವಣ ಆಯೋಗಕ್ಕೆ ಸಲ್ಲಿಸಿದೆ. ಅದನ್ನು ಆಯೋಗ ಶುಕ್ರವಾರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

Advertisement

ಸೋಮವಾರಷ್ಟೇ ಬಾಂಡ್‌ಗಳ ವಿವರ ಸಲ್ಲಿಸದಿದ್ದಕ್ಕಾಗಿ ಸುಪ್ರೀಂಕೋರ್ಟ್‌ ಬ್ಯಾಂಕ್‌ನ್ನು ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಪೀಠದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಬಾಂಡ್‌ಗಳ ವಿವರಗಳನ್ನು ಚುನಾವಣ ಆಯೋಗಕ್ಕೆ ಸಲ್ಲಿಸಿದ ಬಳಿಕ “ಸುಪ್ರೀಂ ಕೋರ್ಟ್‌ ಆದೇಶದಂತೆ ಚುನಾವಣ ಬಾಂಡ್‌ ಗಳ ಮಾಹಿತಿಯನ್ನು ಚುನಾ ವಣ ಆಯೋಗಕ್ಕೆ ನೀಡಲಾಗಿದೆ’ ಎಂದು ಟ್ವೀಟ್‌ ಮಾಡಿದೆ. 2018ರಿಂದ 16,518 ಕೋಟಿ ರೂ. ಮೌಲ್ಯದ ಬಾಂಡ್‌ಗಳ ಮಾರಾಟವನ್ನು ಎಸ್‌ಬಿಐ ಮಾಡಿದೆ.

ಫೆ.15ರಂದು ಸುಪ್ರೀಂಕೋರ್ಟ್‌ ನೀಡಿದ್ದ ಮಹತ್ವದ ಆದೇಶದಲ್ಲಿ ಚುನಾವಣಾ ಬಾಂಡ್‌ಗಳನ್ನು ರದ್ದುಗೊಳಿಸಿತ್ತು.

ರಾಷ್ಟ್ರಪತಿಗೆ ಮನವಿ
ಈ ಮಧ್ಯೆ, ಸುಪ್ರೀಂ ಕೋರ್ಟ್‌ ಬಾರ್‌ ಅಸೋಶಿಯೇಷನ್‌ (ಎಸ್‌ಸಿಬಿಎ) ಅಧ್ಯಕ್ಷ ಆದಿಶ್‌ ಸಿ ಅಗರ್ವಾಲ್‌ ಅವರು ಚುನಾವಣಾ ಬಾಂಡ್‌ ಮಾಹಿತಿ ಬಹಿರಂಗಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಮಧ್ಯ ಪ್ರವೇಶ ಕೋರಿ ಪತ್ರ ದ್ರೌಪದಿ ಮುರ್ಮು ಅವರಿಗೆ ಬರೆದಿದ್ದಾರೆ. “ಚುನಾವಣಾ ಬಾಂಡ್‌ ಮಾಹಿತಿ ಬಹಿರಂಗಗೊಳಿಸ ಬಾರದು. ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪೆನಿಗಳ ಹೆಸರನ್ನು ಬಹಿರಂಗಗೊಳಿಸುವುದರಿಂದ ಕಾರ್ಪೊರೇಟ್‌ ವಲಯವನ್ನು ಅಶಕ್ತಗೊಳಿಸಲು ಕಾರಣವಾಗುತ್ತದೆ. ದೇಣಿಗೆ ನೀಡದ ಅಥವಾ ಕಡಿಮೆ ಮೊತ್ತ ನೀಡಿದ ಕಂಪೆನಿಗಳಿಗೆ ಕಿರುಕುಳ ಆರಂಭವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಮಾಹಿತಿಯನ್ನು ಬಹಿರಂಗಗೊಳಿಸುವುದರಿಂದ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಲಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next