ನಿರ್ಧರಿಸಲು ಆರ್‌ಬಿಐ ನಿಗದಿಪಡಿಸಿರುವ ಮಾನದಂಡ) ಶೇ.7.40ರಿಂದ ಶೇ.7.25ಕ್ಕೆ ಇಳಿಕೆಯಾಗಲಿದೆ. ಸತತ 12ನೇ ಬಾರಿಗೆ ಎಸ್ ಬಿಐ ಹೀಗೆ ಇಳಿಕೆ ಮಾಡುತ್ತಿದೆ. ಇದರಿಂದ ಹಲವರಿಗೆ ಅನುಕೂಲವಾಗಲಿದೆ. ಮಾಸಿಕ ಕಂತುಗಳು ತಗ್ಗಲಿವೆ. ಉದಾಹರಣೆಗೆ 30 ವರ್ಷದ ಅವಧಿಗೆ 25 ಲಕ್ಷ ರೂ. ಮನೆ ಸಾಲ ತೆಗೆದುಕೊಂಡವರಿಗೆ ಮಾಸಿಕ 255 ರೂ. ಕಡಿಮೆಯಾಗಲಿದೆ.
Advertisement
ಹಿರಿಯ ನಾಗರಿಕರಿಗೆ ವೆಲ್ ಕೇರ್: ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವೆಲ್‌ಕೇರ್ ಡೆಪಾಸಿಟ್ ಎಂಬ ಯೋಜನೆ ಶುರು ಮಾಡಲಾಗಿದೆ. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚುಅವಧಿಗೆ ಇಡಲ್ಪಟ್ಟ ಠೇವಣಿಗಳಿಗೆ ಶೇ.0.30 ದರವನ್ನು ಏರಿಸಲಾಗಿದೆ. ಇದರಿಂದ ಹಿರಿಯರಿಗೆ ತುಸು ಲಾಭ ಹೆಚ್ಚಾಗುತ್ತದೆ. ಇದರ ಜೊತೆಗೆ ಮೂರು ವರ್ಷಗಳವರೆಗೆ ಇಡಲ್ಪಟ್ಟ ಠೇವಣಿಗಳ ಮೇಲಿನ ಬಡ್ಡಿದರವನ್ನು 20 ಮೂಲ ಅಂಕಗಳಷ್ಟು ಇಳಿಸಿದೆ. ಇದು ಮೇ 12ರಿಂದ ಜಾರಿಯಾಗಲಿದೆ.