Advertisement

ಎಸ್‌ಬಿಐ ಮುಖ್ಯಸ್ಥೆ ವೇತನ ಖಾಸಗಿಯವರಿಗಿಂತ ಕಮ್ಮಿ

03:45 AM Jun 26, 2017 | Team Udayavani |

ಹೊಸದಿಲ್ಲಿ: ಜಗತ್ತಿನ ಟಾಪ್‌ 50 ಬ್ಯಾಂಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ದೇಶದ ಅತಿ ದೊಡ್ಡ ಬ್ಯಾಂಕ್‌ ಎಂದೆನಿಸಿಕೊಂಡ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರ ಸಂಬಳ ಭಾರೀ ಇರಬಹುದು ಅಂದುಕೊಂಡಿದ್ದರೆ ತಪ್ಪು!

Advertisement

ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ, ಎಚ್‌ಡಿಎಫ್ಸಿ ಮುಖ್ಯಸ್ಥರಿಗೆ ಹೋಲಿಸಿದರೆ, ಭಟ್ಟಾಚಾರ್ಯ ಅವರ ಸಂಬಳ ಏನೇನೂ ಅಲ್ಲ. ಭಟ್ಟಾಚಾರ್ಯ ಅವರು ಕಳೆದ ವಿತ್ತೀಯ ವರ್ಷ 28.96 ಲಕ್ಷ ರೂ. ವೇತನ ಮತ್ತು ಭತ್ಯೆ ಎಂದು 2.43 ಕೋಟಿ ರೂ. ಪಡೆದಿದ್ದಾರೆ. 

ಇದೇ ವೇಳೆ ಐಸಿಐಸಿಐ ಬ್ಯಾಂಕ್‌ ಸಿಇಒ ಚಂದಾ ಕೊಚ್ಚಾರ್‌ 2.66 ಕೋಟಿ ರೂ. ವೇತನ ಮಾತ್ರವಲ್ಲದೆ, ಅತ್ಯು ತ್ತಮ ಕಾರ್ಯಕ್ಷಮತೆಗಾಗಿ 2.2 ಕೋಟಿ ರೂ. ಬೋನಸ್‌ ಪಡೆದಿದ್ದಾರೆ. ಇನ್ನು ಯೆಸ್‌ ಬ್ಯಾಂಕ್‌ ಸಿಇಒ ರಾಣಾ ಕಪೂರ್‌ 6.8 ಕೋಟಿ, ಎಚ್‌ಡಿಎಫ್ಸಿ ಬ್ಯಾಂಕ್‌ನ ಆಡಳಿತ ನಿರ್ದೇಶಕ ಆದಿತ್ಯ ಪುರಿ ಅವರು 10 ಕೋಟಿ ರೂ. ಸಂಬಳ ಪಡೆದಿದ್ದು, 50 ಕೋಟಿ ರೂ.ಗಳ ಷೇರು ಪಡೆದಿದ್ದಾರೆ. ವಿವಿಧ ಸಂಭಾವನೆಯೂ ಖಾಸಗಿ ಸಂಸ್ಥೆಗಳಲ್ಲೇ ಹೆಚ್ಚಿವೆ.

Advertisement

Udayavani is now on Telegram. Click here to join our channel and stay updated with the latest news.

Next