ನವದೆಹಲಿ: ಇತ್ತಿಚೆಗೆ 6 ಬ್ಯಾಂಕ್‌ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿದ್ದರಿಂದಾಗಿ, 1300 ಶಾಖೆಗಳ ಹೆಸರು ಮತ್ತು ಐಎಫ್ಎಸ್‌ಸಿ ಕೋಡ್‌ಗಳನ್ನು ಬದಲಿಸಲಾಗಿದೆ. ಬ್ಯಾಂಕ್ ಶಾಖೆಗಳ ಹೊಸ ಹೆಸರು ಮತ್ತು ಐಎಫ್ಎಸ್‌ಸಿ ಕೋಡ್‌ಗಳನ್ನು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 2017 ಏಪ್ರಿಲ್‌ನಲ್ಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ಸೇರಿದಂತೆ ಆರು ಬ್ಯಾಂಕ್‌ಗಳ ವಿಲೀನ ಪೂರ್ಣಗೊಂಡಿದ್ದು, ಎಸ್‌ಬಿಐನ ಒಟ್ಟು ಗಾತ್ರ, ಮೌಲ್ಯ ಹೆಚ್ಚಳವಾಗಿದೆ. ವಿಲೀನಗೊಂಡ ಬ್ಯಾಂಕ್‌ಗಳ ಕೆಲವು ಶಾಖೆಗಳನ್ನು ಎಸ್‌ಬಿಐ ಶಾಖೆಗಳೊಂದಿಗೆ ಜೋಡಿಸಿರುವುದರಿಂದ ಈ ಬದಲಾವಣೆ ಮಾಡಲಾಗಿದೆ. ಆದರೆ ಹಳೆಯ ಐಎಫ್ಎಸ್‌ಸಿ ಕೋಡ್ ಕೂಡ ಚಾಲ್ತಿಯಲ್ಲಿರಲಿದ್ದು, ಗ್ರಾಹಕರು ಹಳೆಯ ಐಎಫ್ಎಸ್‌ಸಿ ಕೋಡ್‌ಗಳನ್ನು ಬಳಸಿದರೂ ಅದನ್ನು ಹೊಸದಕ್ಕೆ ಪರಿವರ್ತಿಸಿ ಬ್ಯಾಂಕ್‌ಗಳು ವಹಿವಾಟು ನಡೆಸುತ್ತವೆ. ಬದಲಾವಣೆಯಿಂದಾಗಿ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.