Advertisement

ಎಸ್‌ಬಿಐ ಕನಿಷ್ಠ ಬ್ಯಾಲೆನ್ಸ್‌: ಏ.24ರವರೆಗೆ ದಂಡವಿಲ್ಲ

03:45 AM Apr 07, 2017 | Team Udayavani |

ಮುಂಬೈ: ಕನಿಷ್ಠ ಬ್ಯಾಲೆನ್ಸ್‌ ನಿಯಮದ ಅಡಿಯಲ್ಲಿ ಏ.24ರವರೆಗೆ ಯಾವುದೇ ಗ್ರಾಹಕರಿಗೆ ದಂಡ ವಿಧಿಸುವುದಿಲ್ಲ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ ತಿಳಿಸಿದೆ. 

Advertisement

ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌ ಸೇರಿದಂತೆ ಪ್ರಸ್ತುತ ಎಸ್‌ಬಿಐನಲ್ಲಿ ವಿಲೀನಗೊಂಡಿರುವ ಐದು ಅಧೀನ ಬ್ಯಾಂಕ್‌ಗಳ ಮಾಹಿತಿಯನ್ನು ಎಸ್‌ಬಿಐ ವ್ಯವಸ್ಥೆಯಲ್ಲಿ ವಿಲೀನಗೊಳಿಸುವ ಕಾರ್ಯ ಏ.24ರವರೆಗೆ ನಡೆಯಲಿದೆ, ಅದುವರೆಗೂ ಗ್ರಾಹಕರು ದಂಡದ ಬಗ್ಗೆ ಭಯ ಪಡುವಂತಿಲ್ಲ ಎಂದು ಎಸ್‌ಬಿಐ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

“ಎಲ್ಲ ಕಾರ್ಯವಿಧಾನಗಳನ್ನು ಒಂದೇ ವೇದಿಕೆ ಅಡಿಯಲ್ಲಿ ತರುವ ಕಾರ್ಯ ಮೊದಲು ಪೂರ್ಣಗೊಳ್ಳಬೇಕಿದೆ. ನಂತರವಷ್ಟೇ ಹೊಸ ಶುಲ್ಕ ನೀತಿ ಅನ್ವಯವಾಗಲಿದೆ,” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next