Advertisement

‘ಗೋಲ್‌ಮಾಲ್‌’ನಲ್ಲಿ ಸಾಯಿಕುಮಾರ್‌..!

12:55 PM Apr 19, 2018 | Team Udayavani |

ಕನ್ನಡ, ತೆಲುಗು, ತಮಿಳಿನಲ್ಲಿ ಖಡಕ್‌ ಪಂಚಿಂಗ್‌ ಡೈಲಾಗ್‌ ಮೂಲಕ ಸಿನಿರಸಿಕರ ಮನ ಗೆದ್ದ ಡೈಲಾಗ್‌ಕಿಂಗ್‌ ಸಾಯಿಕುಮಾರ್‌ ಈಗ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ರಮಾನಂದ ನಾಯಕ್‌ ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ ‘ಗೋಲ್‌ ಮಾಲ್‌’ ಚಿತ್ರದಲ್ಲಿ ಸಾಯಿಕುಮಾರ್‌ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ತುಳು ಚಿತ್ರರಂಗಕ್ಕೆ ಸಾಯಿಕುಮಾರ್‌ ಅವರದ್ದು ಮೊದಲ ಎಂಟ್ರಿ. ಖಡಕ್‌ ಪೊಲೀಸ್‌ ಅಧಿಕಾರಿಯಾಗಿಯೇ ಗಮನ ಸೆಳೆದ ಸಾಯಿಕುಮಾರ್‌ ಗೋಲ್‌ಮಾಲ್‌ನಲ್ಲೂ ಐಜಿಪಿ ಆಗಿ ಮಿಂಚಿದ್ದಾರೆ. 

Advertisement

ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಸಂಯೋಜನೆ ಜವಾಬ್ದಾರಿ ಸುನಾದ್‌ ಗೌತಮ್‌ ವಹಿಸಿದ್ದು, ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ಸತೀಶ್‌ ಬಂದಲೆ, ಉಮೇಶ್‌ ಮಿಜಾರ್‌, ಸುನೀಲ್‌ ನೆಲ್ಲಿಗುಡ್ಡೆ, ಸುಂದರ್‌ ರೈ ಮಂದಾರ ಚಿತ್ರದಲ್ಲಿದ್ದಾರೆ. ಪಿಲಿಬೈಲ್‌ ಯಮುನಕ್ಕ ಖ್ಯಾತಿಯ ಪೃಥ್ವಿ ಅಂಬರ್‌ ನಾಯಕ, ಶ್ರೇಯಾ ಅಂಚನ್‌ ನಾಯಕಿಯಾಗಿ ಈ ಚಿತ್ರದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next