Advertisement

ಒಂಟಿತನಕ್ಕೆ ಹೇಳಿ ಗುಡ್‌ಬೈ

09:50 AM Jan 30, 2018 | Team Udayavani |

ರಾಯಪುರ: ಇತ್ತೀಚೆಗಷ್ಟೇ ಬ್ರಿಟನ್‌ ಸರ್ಕಾರ ಏಕಾಂಗಿತನ ನಿವಾರಣೆಗಾಗಿಯೇ ಸಚಿವಾಲಯವೊಂದನ್ನು ಆರಂಭಿಸಿ, ಅದಕ್ಕೆ ಸಚಿವರನ್ನೂ ನೇಮಿಸಿತ್ತು. ಇದೀಗ ಛತ್ತೀಸ್‌ಗಢದ ರಾಯು³ರ ಜಿಲ್ಲಾಡಳಿತವು ಹಿರಿಯ ನಾಗರಿಕರಿಗೆ ಕಾಡುವ ಏಕಾಂಗಿತನವನ್ನು ಹೋಗಲಾಡಿಸಲು “ಬಾಪು ಕಿ ಕುಟೀರ್‌’ ಯೋಜನೆ ಆರಂಭಿಸಿದೆ. ವೃದ್ಧರಿಗೆ ತಮ್ಮದೇ ವಯೋಮಾನದವರ ಜೊತೆ ಮಾತನಾಡುತ್ತಾ, ಕ್ರಿಯಾಶೀಲವಾಗಿ ಸಮಯ ಕಳೆಯುತ್ತಾ ತಮಗಿರುವ ಒಂಟಿತನದಿಂದ ಹೊರಬರಲು ಸಹಾಯ ಮಾಡುವುದೇ ಈ ವಿನೂತನ ಯೋಜನೆಯ ಉದ್ದೇಶ.

Advertisement

ಉದ್ಯಾನಗಳು ಮತ್ತು ಇತರೆ ಪ್ರದೇಶಗಳಲ್ಲಿ ಆಕರ್ಷಕವಾಗಿರುವ 50 ಕುಟೀರಗಳನ್ನು ನಿರ್ಮಿಸಲಾಗುವುದು. ಅಲ್ಲಿ ವೃದ್ಧರು ಟಿವಿ ನೋಡುತ್ತಾ, ಆಟವಾಡುತ್ತಾ, ಹರಟೆ ಹೊಡೆಯುತ್ತಾ ಕಾಲ ಕಳೆಯಬಹುದು. ಇಲ್ಲಿಯ ಉದ್ಯಾನವೊಂದರಲ್ಲಿ ನಿರ್ಮಿಸಲಾಗಿರುವ ಮೊದಲ “ಬಾಪು ಕಾ ಕುಟೀರ್‌’ ಅನ್ನು ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್‌ ಸಿಂಗ್‌ ಉದ್ಘಾಟಿಸಿದ್ದಾರೆ. 

ಇವತ್ತಿನ ಸಮಾಜದಲ್ಲಿ ಜನರು ವೃದ್ಧಾಪ್ಯ ಆವರಿಸುತ್ತಿದ್ದಂತೆ ಒಂಟಿಯಾಗುತ್ತಾರೆ, ಆಗ ಅವರಿಗೆ ತಮ್ಮ ಭಾವನೆ ಹೊಂಚಿಕೊಳ್ಳಲು, ಸಮಯ ಕಳೆಯಲು ಅವರದೇ ವಯಸ್ಸಿನವರ ಅಗತ್ಯವಿರುತ್ತದೆ. ಇಲ್ಲಿಗೆ ಬಂದರೆ ಅವರಿಗೆ ಸ್ನೇಹಿತರು ದೊರಕುತ್ತಾರೆ. ಈ ಸುಸಜ್ಜಿತ ಕುಟೀರಗಳಲ್ಲಿ ಕೂಲರ್‌, ಟೀವಿ, 35 ಜನ ಒಟ್ಟಿಗೆ ಕುಳಿತುಕೊಳ್ಳಲು ಆಸನ, ಆಟವಾಡಲು ಕೇರಂ, ಚೆಸ್‌, ನಿಯತಕಾಲಿಕೆಗಳು, ವೃತ್ತ ಪತ್ರಿಕೆಗಳು ಇರುತ್ತವೆ ಎಂದು ರಾಯು³ರ ಜಿಲ್ಲಾಧಿಕಾರಿ ಒ.ಪಿ. ಚೌಧರಿ ಹೇಳಿದ್ದಾರೆ. ನಾವು ಕಟ್ಟಡ ಮತ್ತು ಸೌಲಭ್ಯಗಳನ್ನು ಒದಗಿಸುತ್ತೇವೆ. ಸ್ವಸಹಾಯ ಸಂಸ್ಥೆಗಳು, ಸಾಮಾಜಿಕ ಇದರ ನಿರ್ವಹಣೆ ನೋಡಿಕೊಳ್ಳುತ್ತವೆ. ನಾವು ಇನ್ನೂ ಹೆಚ್ಚಿನ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next