Advertisement

ಜೈಪುರ ಟಿ20ಗೆ ಎದುರಾಗಲಿದೆ ದಟ್ಟ ಮಂಜು

12:20 AM Nov 16, 2021 | Team Udayavani |

ಜೈಪುರ: ಪಿಂಕ್‌ ಸಿಟಿಯ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ 2013ರ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸುವ ಸಡಗರದಲ್ಲಿದೆ.

Advertisement

ಬುಧವಾರ ಇಲ್ಲಿ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮೊದಲ ಟಿ20 ಮುಖಾಮುಖಿ ಸಾಗಲಿದೆ. ಇದು ಜೈಪುರದಲ್ಲಿ ನಡೆಯಲಿರುವ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವೆಂಬುದು ಮತ್ತೊಂದು ಸಡಗರಕ್ಕೆ ಕಾರಣ.

ಆದರೆ ಕಳೆದೆರಡು ದಿನಗಳಿಂದ ಜೈಪುರ ದಟ್ಟ ಮಂಜಿನಿಂದ ಆವೃತ ವಾಗಿದೆ. ಪಂದ್ಯ 7 ಗಂಟೆಗೆ ಆರಂಭ ವಾಗುವುದಿದ್ದರೂ ಮೊದಲ ಇನ್ನಿಂಗ್ಸ್‌ ವೇಳೆಯೇ ಮಂಜಿನ ಪ್ರಭಾವ ತೀವ್ರಗೊಳ್ಳಲಿದೆ. ಹೀಗಾಗಿ “ಆಂಟಿ ಡ್ಯೂ ಸ್ಪ್ರೇ’ ಪ್ರಯೋಗಿಸಬೇಕಾಗುತ್ತದೆ ಎಂದು ಕ್ರೀಡಾಂಗಣದ ಅಧಿಕಾರಿ ಯೊಬ್ಬರು ಹೇಳಿದ್ದಾರೆ.

ಬ್ಯಾಟಿಂಗ್‌ ಟ್ರ್ಯಾಕ್‌?
ಆದರೂ ಇಲ್ಲಿನ ಟ್ರ್ಯಾಕ್‌ ಬ್ಯಾಟಿಂಗಿಗೆ ಹೆಚ್ಚಿನ ಸಹಕಾರ ನೀಡುವ ಸಾಧ್ಯತೆ ಇದೆ. 2013ರಲ್ಲಿ ಇಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಏಕದಿನ ಪಂದ್ಯ ನಡೆದಾಗ ರನ್‌ ಪ್ರವಾಹವೇ ಹರಿದು ಬಂದಿತ್ತು. ಆಸೀಸ್‌ನ 359 ರನ್ನುಗಳ ಕಠಿನ ಗುರಿಯನ್ನು ಭಾರತ 43.3 ಓವರ್‌ಗಳಲ್ಲೇ ಬೆನ್ನಟ್ಟಿತ್ತು. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಶತಕ ಬಾರಿಸಿದ್ದರು.

ಇದನ್ನೂ ಓದಿ:ನಮ್ಮ ಕುಟುಂಬದ ತಂಟೆಗೆ ಬಂದರೆ ಹುಷಾರ್‌: ಬಿಜೆಪಿಗೆ ಎಚ್‌ಡಿಕೆ ಎಚ್ಚರಿಕೆ

Advertisement

25 ಸಾವಿರ ಸಾಮರ್ಥ್ಯ
ಸ್ಟೇಡಿಯಂ 25 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. ಆನ್‌ಲೈನ್‌ನಲ್ಲಿ 8 ಸಾವಿರ ಟಿಕೆಟ್‌ ಮಾರಾಟ ವಾಗಿದೆ ಎಂದು ಆರ್‌ಸಿಎ ಕಾರ್ಯದರ್ಶಿ ಮಹೇಂದ್ರ ವರ್ಮ ಹೇಳಿದ್ದಾರೆ.

ರಾಜಸ್ಥಾನ್‌ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳ ಒಳಜಗಳದಿಂದಾಗಿ ಕಳೆದೊಂದು ದಶಕದಲ್ಲಿ ಜೈಪುರಕ್ಕೆ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ತಪ್ಪಿತ್ತು. ಈಗ ಸಮಸ್ಯೆ ತಿಳಿಯಾಗಿದೆ. ಫೆಬ್ರವರಿಯಲ್ಲಿ ಇಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಕೂಡ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next