Advertisement

ಸವಾಯಿ ಗಂಧರ್ವ ಕಲಾಭವನ ವರ್ಷದಲ್ಲಿ ಬಳಕೆಗೆ ಮುಕ್ತ

01:24 PM Mar 31, 2017 | Team Udayavani |

ಹುಬ್ಬಳ್ಳಿ: ಇನ್ನೊಂದು ವರ್ಷದಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮುಕ್ತವಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. ಗುರುವಾರ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದ ಇನ್ನುಳಿದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Advertisement

ಸವಾಯಿ ಗಂಧರ್ವ ಕಲಾಭವನವನ್ನು ಪಾಲಿಕೆಯ 100 ಕೋಟಿ ರೂ. ವಿಶೇಷ ಅನುದಾನದಲ್ಲಿ ಕಲಾಭವನ ನವೀಕರಣಕ್ಕೆ 1.75 ಕೋಟಿ ರೂ. ಮೊದಲ ಹಂತದ ಅನುದಾನದಡಿ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಪಾಲಿಕೆಯ 4ನೇ 100 ಕೋಟಿ ಅನುದಾನದಲ್ಲಿ ಇನ್ನು 1.75 ಕೋಟಿ  ಬಿಡುಗಡೆಯಾಗಿದ್ದು, ಬಾಕಿ ಉಳಿದ 11ಕ್ಕೂ ಹೆಚ್ಚು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. 

ಸದ್ಯ ಪ್ಲಾಸ್ಟರಿಂಗ್‌, ವೇದಿಕೆ, ನೆಲಹಾಸು, ಸಭಾವನ ಒಳಗಿನ ಕಾಮಗಾರಿ,  ವಿದ್ಯುತ್‌ ದೀಪಗಳ ವ್ಯವಸ್ಥೆ, ಹವಾನಿಯಂತ್ರಿತ ಸೌಲಭ್ಯ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನುಳಿದಂತೆ ಆಸನದ ವ್ಯವಸ್ಥೆ ಆಗಬೇಕು. ಅದಕ್ಕಾಗಿ 40  ಲಕ್ಷ ರೂ.ಗಳ ಅವಶ್ಯಕತೆ ಇದ್ದು, ಈಗಾಗಲೇ ಪಾಲಿಕೆ ಬಜೆಟ್‌ನಲ್ಲಿ ಕಲಾಭವನದ ಅಭಿವೃದ್ಧಿಗೆಂದು 1 ಕೋಟಿ ರೂ. ತೆಗೆದಿರಿಸಲಾಗಿದೆ.

ಅದನ್ನು ಇಲ್ಲಿಗೆ ಬಳಕೆ  ಮಾಡಿಕೊಳ್ಳಲಾಗುವುದು. ಕಲಾಭವನದ ಬಳಕೆ ಶುಲ್ಕ ಕುರಿತಾಗಿ ಸಾಹಿತಿಗಳು, ಸಂಘ-ಸಂಸ್ಥೆಗಳು ಹಾಗೂ ಕಲಾಸ್ತಕರ ಸಮ್ಮುಖದಲ್ಲಿ ಪಾಲಿಕೆಯಿಂದ ಚರ್ಚೆ ನಡೆಸಿ ಕ್ರಮ  ತೆಗೆದುಕೊಳ್ಳಲಾಗುವುದು ಎಂದು ಜಗದೀಶ ಶೆಟ್ಟರ ತಿಳಿಸಿದರು. 

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಮಹಾಪೌರ ಡಿ.ಕೆ. ಚವ್ಹಾಣ, ಉಪಮಹಾಪೌರ ಲಕ್ಷ್ಮೀಬಾಯಿ  ಬಿಜವಾಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಲಕ್ಷ್ಮೀ ಉಪ್ಪಾರ, ಶಿವಾನಂದ ಮುತ್ತಣ್ಣವರ, ಮುಖಂಡರಾದ ನಾಗೇಶ ಕಲುರ್ಗಿ, ಲಕ್ಷ್ಮಣ ಉಪ್ಪಾರ, ಮಲ್ಲಿಕಾರ್ಜುನ  ಸಾವುಕಾರ, ಜವಳಿ, ಬಸವರಾಜ ಅಮ್ಮಿನಬಾವಿ, ಹನುಮಂತಪ್ಪ ದೊಡ್ಡಮನಿ ಸೇರಿದಂತೆ ಮೊದಲಾದವರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next