Advertisement

ಪಂ|ಉಲ್ಲಾಸ ಕಶಾಳಕರಗೆ ಸವಾಯಿ ಗಂಧರ್ವ ರಾಷ್ಟ್ರೀಯ ಪುರಸ್ಕಾರ 

06:40 AM Oct 02, 2018 | Team Udayavani |

ಕುಂದಗೋಳ: ಸಂಗೀತ ಸಾಮ್ರಾಟ ಸವಾಯಿ ಗಂಧರ್ವರ 66ನೇ ಪುಣ್ಯತಿಥಿ ಅಂಗವಾಗಿ ಅ.3 ಮತ್ತು 4 ರಂದು ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಸ್ಥ ಸಂಸ್ಥೆ ಅಧ್ಯಕ್ಷ
ಅರವಿಂದ ಕಟಗಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅನೇಕ ಸಂಗೀತ ದಿಗ್ಗಜರು,ವಿದ್ವಾಂಸರು ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಪುಣೆಯ ಪಂ| ಉಲ್ಲಾಸ ಕಶಾಳಕರ ಅವರಿಗೆ ಸವಾಯಿ ಗಂಧರ್ವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುವುದು. ಹಿರಿಯ ಕಲಾವಿದರಾದ ಬೆಂಗಳೂರಿನ ಪಂ| ರವೀಂದ್ರ ಯಾವಗಲ್‌, ಪಂ| ವಿಶ್ವನಾಥ ಕಾನ್ಹೆàರೆ ಚಿಪ್ಪಳೂಣ, ವಿದುಷಿ ನಿಲೀಮಾ ಛಾಪೇಕರ ಇಂದೂರ, ಪಂ|ಶ್ರೀನಿವಾಸ ಜೋಶಿ ಹುಬ್ಬಳ್ಳಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಕುಂದಗೋಳ ಕಲ್ಯಾಣಪುರಮಠದ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಲಿದ್ದು, ವಿಧಾನ ಪರಿಷತ್‌ ಸಭಾಪತಿ ಬಸವರಾಜ
ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸುವರು.

Advertisement

Udayavani is now on Telegram. Click here to join our channel and stay updated with the latest news.

Next