Advertisement
1. ಸಾವಿತ್ರಿಬಾಯಿ ಪುಲೆ ಅವರನ್ನು “ಆಧುನಿಕ ಶಿಕ್ಷಣದ ತಾಯಿ’ ಎಂದು ಕರೆಯಲಾಗುತ್ತದೆ.2. ಅವರು 1831ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು.
3. ಬಾಲ್ಯವಿವಾಹ ರೂಢಿಯಿದ್ದ ಆ ಕಾಲದಲ್ಲಿ, ಸಾವಿತ್ರಿಬಾಯಿ ಅವರು ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಪುಲೆ ಅವರನ್ನು 8ನೇ ವಯಸ್ಸಿನಲ್ಲಿ ಮದುವೆಯಾದರು.
4. ಪತಿ, ಜ್ಯೋತಿ ಬಾ ಅವರ ನಿರಂತರ ಸಹಕಾರದಿಂದ, ಸಾವಿತ್ರಿಯವರು 17ನೇ ವಯಸ್ಸಿನಲ್ಲಿ ಶಿಕ್ಷಕ ತರಬೇತಿ ಪಡೆದು, ಮಹಾರಾಷ್ಟ್ರದ ಮೊದಲ ಶಿಕ್ಷಕಿಯಾದರು.
5. ಆಗ ಹೆಣ್ಣೊಬ್ಬಳು ಶಿಕ್ಷಕಿಯಾಗುವುದಕ್ಕೆ ಸಮಾಜದಲ್ಲಿ ಸಮ್ಮತವಿರಲಿಲ್ಲ. ಹಾಗಾಗಿ, ಸಾವಿತ್ರಿಯವರು ಅನೇಕ ತೊಂದರೆ, ಅವಮಾನಗಳನ್ನು ಎದುರಿಸಬೇಕಾಯ್ತು.
6. ಅವರು ಶಾಲೆಗೆ ಪಾಠ ಮಾಡಲು ಹೋಗುವಾಗ ಹಲವರು ಕೆಸರು, ಸಗಣಿ ಎರಚುತ್ತಿದ್ದರಂತೆ. ಹೀಗಾಗಿ ಅವರು ತಮ್ಮ ಬ್ಯಾಗಿನಲ್ಲಿ ಒಂದು ಸೀರೆಯನ್ನು ಇಟ್ಟುಕೊಳ್ಳುತ್ತಿದ್ದರಂತೆ.
7. ಬಾಲ್ಯವಿವಾಹ, ಸತಿ ಸಹಗಮನ, ಕೇಶ ಮುಂಡನದಂಥ ಪದ್ಧತಿಗಳ ವಿರುದ್ಧ ದನಿ ಎತ್ತಿದ ಸಾವಿತ್ರಿಬಾಯಿ, ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆ, ಅಬಲಾಶ್ರಮಗಳನ್ನು ತೆರೆದರು.
8. ಈ ಎಲ್ಲ ಕೆಲಸಗಳನ್ನು ಗಮನಿಸಿದ ಬ್ರಿಟಿಷ್ ಸರಕಾರ, “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್’ ಎಂಬ ಬಿರುದು ಕೊಟ್ಟಿತು.
9. “ಸತ್ಯೋಧಕ ಸಮಾಜ’ದ ಅಧ್ಯಕ್ಷೆಯಾಗಿ, ಹಿಂದೂ ಧಾರ್ಮಿಕ ವಿವಾಹಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದರು.
10. 1897ರಲ್ಲಿ, ಪ್ಲೇಗ್ ಪೀಡಿತರ ಸೇವೆಯಲ್ಲಿ ತೊಡಗಿದ್ದಾಗ ಸಾವಿತ್ರಿಬಾಯಿಯವರಿಗೂ ಸೋಂಕು ತಗುಲಿ, ತೀರಿಕೊಂಡರು.