Advertisement

ಮಹಿಳೆ, ಪುರಷ ರಿಗೆ ಸಮಾನ ಅವಕಾಶ ಕೊಟ್ಟಿದ್ದೆ ಸಾವಿತ್ರಿ ಬಾಯಿ ಫುಲೆ : ಕೆ. ಮಲ್ಲಿಕಾರ್ಜುನ

07:17 PM Jan 03, 2022 | Team Udayavani |

ಕುರುಗೋಡು: ಇಂದು ಮಹಿಳೆಗೆ ಮತ್ತು ಪುರುಷ ರಿಗೆ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರೆ ಅದಕ್ಕೆ ಕಾರಣ ಅಂದು ಸಮಾನತೆಯ ಹಕ್ಕಿಗೆ ಕಾರಣವಾಗಿ ಕ್ರಾಂತಿಕಾರಿ ಮಹಿಳೆಯಾಗಿ ಹೊರಹೊಮ್ಮಿದ್ದ ಸಾವಿತ್ರಿಬಾಯಿ ಫುಲೆಅವರಂಥ ಶ್ರಮವೇ ಕಾರಣ ಎಂದು ಮುಖ್ಯ ಶಿಕ್ಷಕ  ಮಲ್ಲಿಕಾರ್ಜುನ ಹೇಳಿದರು.

Advertisement

ಪಟ್ಟಣದ ಸಮೀಪದ ಬೈಲೂರ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಹಮ್ಮಿಕೊಂಡಿದ್ದ 191ನೇ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಣೆ ಮಾಡಿ ಬಳಿಕ ಮಾತನಾಡಿದ ಅವರು,  1848 ರಿಂದ 1852 ರ ಅವಧಿಯಲ್ಲಿ ಸುಮಾರು 18 ಪಾಠ ಶಾಲೆಗಳನ್ನು ಸಾವಿತ್ರಿಬಾಯಿ ಫುಲೆ ದಂಪತಿಗಳು ತೆರೆದರು, ಸಮಾಜದ ಎಲ್ಲ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣವಾಗುವ ಮೂಲಕ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ ಸೇರಿದಂತೆ ಸಮಾಜದ ಅನಿಷ್ಠ ಪದ್ದತಿಗಳ ವಿರುದ್ದ ಹೋರಾಡಿದವರಾಗಿದ್ದಾರೆ.

ಆ ಕಾಲದಲ್ಲಿ ಸ್ತ್ರೀಯೋಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ ಹಾಗೂ ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆಯಲ್ಲಿದ್ದ ಜನತೆಗೆ ಅವರು ಪಾಠ ಶಾಲೆಗೆ ಹೋಗುವಾಗ ಕೆಲವರು ಕೇಕೆ ಹಾಕಿ ನಗುವುದರೊಂದಿಗೆ ಅವರ ಮೇಲೆ ಕೆಸರು, ಸೆಗಣಿ ಎರಚುತ್ತಿದ್ದರು ಇದರಿಂದ ದೃತಿ ಗೆಡದ ಸಾವಿತ್ರಿ ಬಾಯಿ ಫುಲೆ ಅವರು ಯಾವಾಗಲೂ ಒಂದು ಹೆಚ್ಚಿಗೆ ಸೀರೆಯನ್ನು ಇಟ್ಟು ಕೊಂಡಿರುತ್ತಿದ್ದರು ಎಂದು ಹೇಳಿ ಅವರ ಜೀವನ ಯಶೋಗಾಥೆಯನ್ನು ಎಳೆ ಎಳೆಯಾಗಿ ವಿವರಿಸಿದರಲ್ಲದೇ ಇವರ ಅಂದಿನ ಎಲ್ಲ ಸಾಧನೆಗಳನ್ನು ಪರಿಗಣಿಸಿ ಬ್ರಿಟೀಷ್ ಸರಕಾರ ಅವರಿಗೆ “ಇಂಡಿಯನ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ನೀಡಿದೆ ಎಂದರು.

ಶಾಲೆಯ ಎಸ್ಡಿ ಎಂ ಸಿ ಉಪಾಧ್ಯಕ್ಷ ರಾದ ಸಿ. ವಿಶಾಲಾಕ್ಷಿ ಲಿಂಗಪ್ಪ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಗೌರವಿಸುವ ಭಾವನೆ ಕಡಿಮೆಯಾಗಿದೆ ಅದು ಆಗಬಾರದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಿಂದಲೇ ಗೌರವಿಸುವ ಭಾವನೆ ಇರಬೇಕು ಶಿಸ್ತು, ಸಮಯಪ್ರಜ್ಞೆ ಹಾಗೂ ಸಂಯಮಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಇಂಥಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ. ಮಲ್ಲಯ್ಯ, ಗ್ರಾಪಂ ಸದಸ್ಯರು, ಎಸ್ಡಿ ಎಂ ಸಿ ಸದಸ್ಯರು ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next