Advertisement
ಇಲ್ಲಿನ ಹರಿಜನವಾಡಬಡಾವಣೆಯಲ್ಲಿರುವ ಡಾ| ಅಂಬೇಡ್ಕರ್ಸಮುದಾಯ ಭವನದಲ್ಲಿ ಕರ್ನಾಟಕರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯದೇವದಾಸಿ ಮಹಿಳೆಯರ ವಿಮೋಚನಾಸಂಘ ಹಾಗೂ ದಲಿತ ಹಕ್ಕುಗಳ ಸಮಿತಿ ಜಿಲ್ಲಾಘಟಕಗಳ ಆಶ್ರಯದಲ್ಲಿ ಶಿಕ್ಷಕಿ ಸಾವಿತ್ರಿಬಾಯಿಫುಲೆ ಅವರ 190ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ :
ಕವಿತಾಳ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾರತದ ಮೊಟ್ಟ ಮೊದಲಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆಯವರ190ನೇ ಜನ್ಮದಿನ ಆಚರಿಸಲಾಯಿತು.ಶಾಲೆಯ ಮುಖ್ಯೋಪಾಧ್ಯಾಯ ಶೇಕ್‌ಹಮೀದ್ ಮಾತನಾಡಿ, ಸಾವಿತ್ರಿಬಾಯಿಫುಲೆಯವರು ದೇಶ ಕಂಡಂತಹ ಮಹಾನ್‌ಮಹಿಳೆ. ಭಾರತೀಯ ಸಮಾಜವು ವರ್ಣ, ಜಾತಿ ವರ್ಗ ವ್ಯವಸ್ಥೆಯನ್ನುತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸಿದೆ. ಇಂತಹಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗಾಗಿಯೇ ಮೊಟ್ಟ ಮೊದಲ ಬಾರಿಗೆ ಶಾಲೆಗಳನ್ನು ತೆರದು ಜ್ಞಾನನೀಡಿದವರು ಜ್ಯೋತಿಬಾಯಿ ಫುಲೆ ಮತ್ತುಸಾವಿತ್ರಿಬಾಯಿ ಫುಲೆ ದಂಪತಿ. ಅದರಲ್ಲೂ ಮಹಿಳೆಯರಿಗಾಗಿ ಹಗಲಿರುಳು ಎನ್ನದೇ ಅವರ ಶಿಕ್ಷಣ ಹಾಗೂ ಅಭ್ಯುದಯಕ್ಕಾಗಿತಮ್ಮ ಜೀವನವನ್ನೇ ಅರ್ಪಿಸಿಕೊಂಡು ಅಕ್ಷರದ ಕ್ರಾಂತಿ ಮಾಡಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಎಂದು ಅಜರಾಮರಾದರು ಎಂದು ಹೇಳಿದರು. ಪಟ್ಟಣದ ವಿವಿಧ ಶಾಲೆಗಳಲ್ಲಿ ಶಿಕ್ಷಕಿ ಮಾತೆ ಫುಲೆ ಜನ್ಮದಿನ ಆಚರಿಸಲಾಯಿತು.