Advertisement

ಸಾವಿತ್ರಿಬಾಯಿ ಫುಲೆ ಜಯಂತಿ ಶಿಕ್ಷಕಿಯರ ದಿನವಾಗಲಿ

12:38 PM Jan 05, 2018 | Team Udayavani |

ಬೀದರ: ಸ್ವಾತಂತ್ರ್ಯ ಪೂರ್ವದಲ್ಲಿ ದಲಿತ, ಹಿಂದುಳಿದ ಶೋಷಿತ ಸಮಾಜದ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ
ಶಿಕ್ಷಣದ ಬೀಜ ಬಿತ್ತಿದ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಶಿಕ್ಷಕಿಯರ ದಿನವಾಗಿ ಆಚರಿಸಬೇಕು ಎಂದು ವೇದಿಕೆ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್‌ ಹೇಳಿದರು.

Advertisement

ವಿದ್ಯಾನಗರ ಕಾಲೋನಿಯ ಬೌದ್ಧ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದಿಂದ ಸಾವಿತ್ರಿಬಾಯಿ
ಫುಲೆ ಅವರ 187ನೇ ಜಯಂತಿ ನಿಮಿತ್ತ ಆಯೋಜಿಸಿದ್ದ “ಅರಿವಿನ ತಾಯಿಗೆ ನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರಯ ಮಾತನಾಡಿದರು.

ಸಂಗೀತಾ ಓಂಕಾರ ಮಾತನಾಡಿ, ದೇಶದ ಮಹಿಳೆಯರ ಏಳ್ಗೆಗಾಗಿ ದುಡಿದ ಸಾವಿತ್ರಿಬಾಯಿ ಫುಲೆ ಅವರ ಜೀವನ
ಚರಿತ್ರೆಯನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
 
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ವಿಧವೆಯರ ಸ್ವಾಭಿಮಾನ ಎತ್ತಿ ಹಿಡಿದವರು
ಸಾವಿತ್ರಿಬಾಯಿ. ನಾವೆಲ್ಲರೂ ವಿಧವೆಯರಿಗೆ ಗೌರವ ನೀಡಿದಾಗ ಮಾತ್ರ ಫುಲೆ ಅವರ ಕನಸು ನನಸಾಗುತ್ತದೆ ಎಂದು ಹೇಳಿದರು. 

ಭಾರತೀಯ ಬೌದ್ಧ ಮಹಾಸಭೆ ಜಿಲ್ಲಾಧ್ಯಕ್ಷ ಜಗನಾಥ ಬಡಿಗೇರ್‌ ಮಾತನಾಡಿ, ಸಾವಿತ್ರಿಬಾಯಿ ಫುಲೆ ಮತ್ತು
ಜ್ಯೋತಿಬಾ ಫುಲೆ ಅವರು ತ್ಯಾಗ ಬಲಿದಾನ ನೀಡಿದ ಮಹಿಳೆಯರು ಮತ್ತು ವಿಧವೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ನೀಡಿದ ಕೊಡುಗೆ ಕುರಿತು ಮಾತನಾಡಿದರು.
 
ತಾಲೂಕು ಸಂಚಾಲಕ ಬಕ್ಕಪ್ಪಾ ದಂಡಿನ್‌ ಕಾಂತ್ರಿ ಗೀತೆಗಳನ್ನು ಹಾಡಿದರು. ಪ್ರಮುಖರಾದ ಶರಣಪ್ಪಾ ಕುದುರೆ,
ಎಸ್‌.ಬಿ. ಕುಚಬಾಳ, ಲಕ್ಷ್ಮಣರಾವ್‌ ಕಾಂಚೆ, ಇಂದುಮತಿ ಸಾಗರ, ಗಂಗಮ್ಮಾ ಫುಲೆ, ಅಂಜಮ್ಮಾ ರೆಡ್ಡಿ, ಶಿವರಾಜ ಪೂಜಾರಿ, ಗೌತಮ ಮುತಂಗಿಕರ್‌ ಇದ್ದರು. ಅರುಣ ಪಟೇಲ ನಿರೂಪಿಸಿದರು. ಶಾರದಾ ಆಳಂದಕರ್‌ ಸ್ವಾಗತಿಸಿದರು. ಮೀನಾಕ್ಷಿ ಸಾಗರ ವಂದಿಸಿದರು.

ಸಾವಿತ್ರಿಬಾಯಿ ಫುಲೆ ಕುರಿತು ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವೈಶಾಲಿ ಸಾಗರ,
ದ್ವಿತೀಯ ಸ್ಥಾನ ಪಡೆದ ಶರಣ ಶಿವರಾಜ ಪೂಜಾರಿ ಮತ್ತು ತೃತೀಯ ಸ್ಥಾನ ಪಡೆದ ಮಧು ಫುಲೆ, ಅಂಜಮ್ಮಾ ರೆಡ್ಡಿ ಅವರಿಗೆ ಬಹುಮಾನ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next