Advertisement
ಹೆಚ್ಚಾಗಿದೆ ಆಮದು ಪ್ರಮಾಣಕಳೆದ ವರ್ಷ ರಷ್ಯಾ ಮೇಲೆ ನಿರ್ಬಂಧ ನಂತರ ಆ ದೇಶದಿಂದ ಕಚ್ಚಾ ತೈಲ ಆಮದನ್ನು ಭಾರತ ತೀವ್ರವಾಗಿ ಹೆಚ್ಚಿಸಿದೆ. ಈ ಮೊದಲಿಗಿಂತ 10 ಪಟ್ಟು ಅಧಿಕ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಭಾರತ ರಷ್ಯಾದಿಂದ ಆಮದು ಮಾಡಿಕೊಂಡಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಭಾರತ ಕಚ್ಚಾ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ, ನಂತರ ಹೆಚ್ಚಿನ ಲಾಭಕ್ಕೆ ಅದನ್ನು ಐರೋಪ್ಯ ರಾಷ್ಟ್ರಗಳಿಗೆ ಭಾರತ ಮಾರಾಟ ಮಾಡುತ್ತಿದೆ. ಅಲ್ಲದೇ ರಷ್ಯಾದಿಂದ ಕಚ್ಚಾ ತೈಲ ಆಮದು ಮತ್ತು ಐರೋಪ್ಯ ರಾಷ್ಟ್ರಗಳಿಗೆ ಸಂಸ್ಕರಿದ ತೈಲ ಮಾರಾಟದಲ್ಲಿ ತೀವ್ರವಾಗಿ ಏರಿಕೆಯಾಗಿದೆ.
2022ರ ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿತು. ಇದನ್ನು ವಿರೋಧಿಸಿ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಮತ್ತು ಆಸ್ಟ್ರೇಲಿಯಾ ಸೇರಿ ಒಟ್ಟು ಏಳು ರಾಷ್ಟ್ರಗಳು ರಷ್ಯಾ ಕಚ್ಚಾ ತೈಲದ ಮೇಲೆ ನಿರ್ಬಂಧ ವಿಧಿಸಿತು. ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 60 ಡಾಲರ್ ಬೆಲೆಯನ್ನು ನಿಗದಿಪಡಿಸಿದವು. ಅಲ್ಲದೇ ಇದು ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಹೆಚ್ಚಿನ ಮೊತ್ತಕ್ಕೆ ರಷ್ಯಾ ವಹಿವಾಟು ನಡೆಸಿದರೆ, ಪಾಶ್ಚಿಮಾತ್ಯ ಸಾಗಣೆದಾರರು ಮತ್ತು ವಿಮಾದಾರರು ರಷ್ಯಾದ ತೈಲ ವ್ಯಾಪರದಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಅಲ್ಲದೇ ರಷ್ಯಾದ ಕಚ್ಚಾ ತೈಲದ ಮೇಲೆ ಪಶ್ಚಿಮ ರಾಷ್ಟ್ರಗಳ ಅವಲಂಬನೆಯನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಖರೀದಿಗೆ ಮುಂದಾದ ಭಾರತ, ಚೀನಾ:
ನಿರ್ಬಂಧವನ್ನು ಮೀರಿ ರಷ್ಯಾದಿಂದ ಕಚ್ಚಾ ತೈಲ ಖರೀದಿಗೆ ಭಾರತ ಮತ್ತು ಚೀನಾ ಮುಂದಾದವು. ಈ ಹಿನ್ನೆಲೆಯಲ್ಲಿ ತೈಲ ಮಾರಾಟಕ್ಕೆ ರಷ್ಯಾಗೆ ಭಾರತ ಮತ್ತು ಚೀನಾ ಪ್ರಮುಖ ದೊಡ್ಡ ದೇಶಗಳಾದವು. ಇದೇ ವೇಳೆ ತೈಲ ಸಂಸ್ಕಾರಣಾ ಕಂಪನಿಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಕಡಿಮೆ ಮೊತ್ತಕ್ಕೆ ಭಾರತದ ರಿಫೈನರಿಗಳಿಗೆ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ರಷ್ಯಾ ಮಾರಾಟ ಮಾಡಿತು. ವರದಿಯ ಪ್ರಕಾರ, 15 ಡಾಲರ್‌ನಿಂದ 20 ಡಾಲರ್ ಬೆಲೆ ಭಾರತಕ್ಕೆ ರಷ್ಯಾ ಕಚ್ಚಾ ತೈಲ ಮಾರಾಟ ಮಾಡಿದೆ.
Related Articles
2021ರವರೆಗೆ ಒಟ್ಟಾರೆ ಭಾರತದ ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪ್ರಮಾಣ ಶೇ.2ರಷ್ಟು ಇತ್ತು. ಪ್ರಸ್ತುತ ಇದು ಶೇ.20ಕ್ಕೆ ಏರಿಕೆಯಾಗಿದೆ. ಕಚ್ಚಾ ತೈಲ ಆಮದಿನಲ್ಲಿ ಟಾಪ್ ಐದು ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತಕ್ಕೆ, ಇದರಿಂದ ದೊಡ್ಡ ಪ್ರಮಾಣದ ಉಳಿತಾಯವಾಗಿದೆ.
Advertisement