Advertisement

ಕೋವಿಡ್ ದಿಂದ ಬಡಜನರ ಜೀವ ಉಳಿಸಿ

03:57 PM Apr 23, 2021 | Team Udayavani |

ಹಾಸನ: ರಾಜ್ಯದಲ್ಲಿ ಒಂದು ವರ್ಷ ಅಭಿವೃದ್ಧಿ ಕಾಮಗಾರಿ ಗಳನ್ನು ನಿಲ್ಲಿಸಿದರೂ ಚಿಂತೆಯಿಲ್ಲ. ಕೊರೊನಾದಿಂದ ಬಡಜನರನ್ನು ರಕ್ಷಿಸಬೇಕು ಎಂದು ಜೆಡಿಎಸ್‌ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣಸರ್ಕಾರವನ್ನು ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿಮಾತನಾಡಿ, ಸಿರಿವಂತರುಹೇಗೋ ರಕ್ಷಣೆ ಪಡೆದುಕೊಳ್ಳುತ್ತಾರೆ. ಆದರೆರೈತರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕೊರೊನಾ ಗೆ ತುತ್ತಾದ ಬಡಜನರು ಜೀವ ಕಳೆದುಕೊಳ್ಳದಂತೆಸರ್ಕಾರ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಬೇಕು.

ಅಗತ್ಯಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನುಪೂರೈಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ತಕ್ಷಣತಲಾ 10ಕೋಟಿ ರೂ. ಗಳನ್ನು ತುರ್ತು ಪರಿಹಾರಕಾರ್ಯಗಳಿಗೆ ಬಿಡುಗಡೆ ಮಾಡಬೇಕು ಎಂದುಸಲಹೆ ನೀಡಿದರು.

ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಚಿಕಿತ್ಸೆಗೆದಾಖಲಾಗುವವರ ವಿವರ ಪಡೆದು ಚಿಕಿತ್ಸಾವೆಚ್ಚವನ್ನು ಸರ್ಕಾರವೇ ಪಾವತಿಸುವುದು ಎಂದುಆಸ್ಪತ್ರೆಗಳಿಗೆ ಹಾಗೂ ಸೋಂಕಿತರಿಗೆಖಚಿತಪಡಿಸಿಬೇಕು ಎಂದ ಅವರು, ರಾಜ್ಯ ಸರ್ಕಾರಕೊರೊನಾ ವಿಚಾರದಲ್ಲಿ ಬಡಜನರ ಪ್ರಾಣದ ಜತೆಚೆಲ್ಲಾಟವಾಡಬಾರದು.

ಈಗಲಾದರೂ ಕಠಿಣಕ್ರಮಗಳನ್ನು ಕೈಗೊಂಡು ಸೋಂಕು ನಿಯಂತ್ರಿಸಲಿಎಂದರು.ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಲುಸಾರಿಗೆ ಸಂಸ್ಥೆ ನೌಕರರ ಮುಷ್ಕರವೂ ಕಾರಣ. ಹಬ್ಬದಸಂದರ್ಭದಲ್ಲಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರಮಾಡಿದ್ದರಿಂದ ಬಸ್‌ ಸೌಲಭ್ಯವಿಲ್ಲದೆ ಜನರು ಖಾಸಗಿವಾಹನಗಳನ್ನು ಅವಲಂಬಿಸಿದರು.

Advertisement

ಖಾಸಗಿವಾಹನಗಳು ದುಬಾರಿ ಪ್ರಯಾಣ ದರ ವಸೂಲಿಮಾಡಿದ್ದಲ್ಲದೆ , ಜನರನ್ನು ಕುರಿಗಳಂತೆತುಂಬಿಕೊಂಡು ಸಂಚರಿಸಿದ್ದರಿಂದ ಕೊರೊನಾಹರಡಿತು ಎಂದರು.

ದೈನಂದಿನ ಜೀವನಕ್ಕೆತೊಂದರೆಹೊಳೆನರಸೀಪುರ: ತಾಲೂಕಿನಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿಬೀದಿ ಬದಿ ವ್ಯಾಪಾರಿಗಳು ಮತ್ತು ತರಕಾರಿ ವರ್ತಕರು ದೆ„ನಂದಿನ ಜೀನವಕ್ಕೆ ತೊಂದರೆಯಾಗಿದೆ ಎಂದುಮಾಜಿ ಸಚಿವ ಹಾಗು ಶಾಸಕ ಎಚ್‌.ಡಿ.ರೇವಣ್ಣ ತಿಳಿಸಿದರು.ತಾಲೂಕು ಕಚೇರಿಯಲ್ಲಿ ನಡೆದ ಅ ಧಿಕಾರಿಗಳ ಸಭೆ ನಂತರ ಮಾತನಾಡಿ, ಕಳೆದ ವರ್ಷವೂ ಇದೇ ರೀತಿಕೊರೊನಾ ಆವರಿಸಿ, ಬಡವರು ಶೋಷಿತರು ಮತ್ತು ಅಲ್ಪಸಂಖ್ಯಾತರು ಜೀವನ ನಡೆಸಲು ಹರಸಾಹಸಪಡಬೇಕಾಯಿತು.

ಹೀಗಾಗಿ, ರಾಜ್ಯ ಸರ್ಕಾರ ದೈನಂದಿನ ಜೀವನ ನಡೆಸಲು ಕಷ್ಟ ಪಡುತ್ತಿರುವವರಿಗೆಜೀವನ ನಡೆಸಲು ಅವಶ್ಯವಾಗಿ ಬೇಕಾಗಿರುವ ಆಹಾರ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲು ಸರ್ಕಾರಮುಂದಾಗುವಂತೆ ಮನವಿ ಮಾಡಿದರು. ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊವಿಡ್‌ ಪ್ರಕರಣಗಳುಹೆಚ್ಚಾಗಿದ್ದು ಅದನ್ನು ತಡೆಗಟ್ಟಲು ಪತ್ರಿಯೊಬ್ಬರು ನಿಯಮಗಳನ್ನು ಪಾಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next