Advertisement

ಭೂಮಿ ಉಳಿಸಿ, ಹಸ್ತಾಂತರಿಸಿ

06:00 AM Oct 30, 2017 | Team Udayavani |

ಬೆಳ್ತಂಗಡಿ: ಈ ಭೂಮಿ ನಮ್ಮ ಹಿಂದಿನ ಪೀಳಿಗೆಯಿಂದ ಬಳುವಳಿ ಯಾಗಿ ಬಂದುದು. ಅದನ್ನು ಉಳಿಸಿ ಹಾಗೆಯೇ ಮುಂದಿನ ಪೀಳಿಗೆಗೆ  ಹಸ್ತಾಂತರಿ ಸುವ ಜವಾಬ್ದಾರಿ ನಮ್ಮ ಮೇಲಿದೆ. ಅಂತಹ ಜಾಗೃತಿ ನೀಡುವ ಅಭಿ ಯಾನ ಕೈಗೊಳ್ಳಲಾಗಿದೆ. ಜತೆಗೆ ಮೋದಿ ಯವರ ಆಶಯದ “ಸ್ವಚ್‌f ಹೀ ಸೇವಾ’ ಅಭಿಯಾನವಿರುತ್ತದೆ ಎಂದು ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ರವಿವಾರ ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ 12 ಲಕ್ಷ ಮಂದಿಗೆ ಜನ  ಧನ ಖಾತೆಗೆ ರೂಪೇ ಕಾರ್ಡ್‌ ವಿತ ರಣೆ, ಡಿಜಿಟಲ್‌ ಇಂಡಿಯಾಕ್ಕೆ ಸೇರ್ಪಡೆ ಹಾಗೂ ಭೂಮಿ ಉಳಿ ಸುವ ಯೋಜನೆಗೆ ಪ್ರಧಾನಿ ಯವ ರಿಂದ ಚಾಲನೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.

40 ಲಕ್ಷ ಜನಧನ
ಈಗಾಗಲೇ 12 ಲಕ್ಷ ಜನಧನ ಖಾತೆ ತೆರೆಯಲು ಸಹಕರಿಸಿದ್ದು 2018ರ ಜೂನ್‌ ಒಳಗೆ 40 ಲಕ್ಷ ಜನಧನ ಖಾತೆ ತೆರೆಯಲು ಸಹಕರಿಸಲಾಗುವುದು. ಎಸ್‌ಬಿಐ ಭೀಮ್‌ ಅಪ್ಲಿಕೇಶನ್‌ ಮೂಲಕ ಸ್ವಸಹಾಯ ಸಂಘಗಳ ವ್ಯವಹಾರ ವನ್ನು ನಗದು ರಹಿತ ಮಾಡ ಲಾಗುವುದು. ಗ್ರಾಮಾಭಿವೃದ್ಧಿ ಯೋಜನೆ ಮೂಲಕ 10,000 ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಜನಧನ ಖಾತೆ ತೆರೆಯಲಾಗಿದೆ. ಮಹಿಳೆಯರೂ ಪ್ರಗತಿಯ ಪಾಲು ದಾರ ರಾಗಿದ್ದಾರೆ ಎಂದು ಹೇಳಿದರು.

ಸಹಕಾರಿ ಸೇತು
ಸರಕಾರದ ಕಾರ್ಯಕ್ರಮಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ಸದುದ್ದೇಶದಿಂದ ಸರಕಾರ ಹಾಗೂ ಸಾರ್ವ ಜನಿಕರ ನಡುವೆ ಸಹಕಾರಿ ಸೇತು ವಾಗಿ ಯೋಜನೆ ಕಾರ್ಯ ನಿರ್ವ ಹಿಸು ತ್ತಿದೆ. ಇಂದಿಗೆ 18,000 ಸಿಬಂದಿ ಯೋಜನೆಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದು ರಾಜ್ಯಾದ್ಯಂತ ಒಟ್ಟು 3,68,531 ಸ್ವಸಹಾಯ ಸಂಘಗಳನ್ನು ರಚಿಸಿ, ರಾಜ್ಯದ 37,21,758 ಕುಟುಂಬ ಗಳು ಪ್ರಯೋಜನ ಪಡೆ ಯು ವಂತಾಗಿದೆ ಎಂದರು.

ಸ್ಟಾರ್ಟಪ್‌
ಸರಕಾರದ ಮಹತ್ವಾಕಾಂಕ್ಷೆಯ ಸ್ಟಾರ್ಟಪ್‌ಗ್ೂ ಧರ್ಮಸ್ಥಳ ಪೋಷಣೆ ನೀಡಿದೆ. ದೇಶದ ಉದ್ದಗಲ ಹರಡಿದ 27 ರುಡ್‌ಸೆಟ್‌ ಸಂಸ್ಥೆಗಳ ಮೂಲಕ ಸ್ವ ಉದ್ಯೋಗ ತರಬೇತಿ ನೀಡಿದರೆ ಈಗ ಕೇಂದ್ರ ಸರಕಾರ ಬ್ಯಾಂಕ್‌ಗಳ ಮೂಲಕ ದೇಶದ 587 ಜಿಲ್ಲೆಗಳಲ್ಲಿ ನಡೆಸುತ್ತಿರುವ ಆರ್‌ಸೆಟಿಗಳ ಮೂಲಕ 2.5 ಮಿಲಿಯ ಜನರಿಗೆ ಸ್ವ ಉದ್ಯೋಗ ತರಬೇತಿ ನೀಡಿದೆ ಎಂದರು.

Advertisement

ಎಸ್‌ಬಿಐ ಭೀಮ್‌
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಜತೆಗೂಡಿ ಎಸ್‌ಬಿಐ ಭೀಮ್‌ ಆ್ಯಪ್‌ ಮೂಲಕ ಸ್ವಸಹಾಯ ಸಂಘಗಳ ವ್ಯವಹಾರವನ್ನು ನಗದು ರಹಿತ ಮಾಡುವ ಯೋಜನೆಗೆ ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌, ಆಡಳಿತ ನಿರ್ದೇಶಕ ಪರ್ವೀನ್‌ ಕುಮಾರ್‌ ಗುಪ್ತಾ ಅವರೊಡನೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಶಾಲಿನಿ ಹಾಗೂ ಶಕೀಲಾ ಬಾನು ಅವರಿಗೆ ರೂಪೇ ಕಾರ್ಡ್‌ಗಳನ್ನು ಪ್ರಧಾನಮಂತ್ರಿಗಳು ವಿತರಿಸಿದರು. ಭೂಮಿ ಉಳಿಸುವ ನೂತನ ಯೋಜನೆಯ ಲಾಂಛನ ಅನಾವರಣ ಮಾಡಿದರು.

ಸಮ್ಮಾನ
ಪ್ರಧಾನಿ ಅವರಿಗೆ ಮೈಸೂರು ಪೇಟ ತೊಡಿಸಿ, ಕೆಂಬಣ್ಣದ ಶಾಲು ಹೊದೆಸಿ, ಏಲಕ್ಕಿ ಮಾಲೆ ಹಾಕಿ, ಸರಸ್ವತಿ ವಿಗ್ರಹ ನೀಡಿ ಹೆಗ್ಗಡೆ ಸಮ್ಮಾನಿಸಿದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ ಸ್ವಾಗತಿಸಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ನಿರ್ವಹಿಸಿದರು.

ಅಭಿವೃದ್ಧಿಯ ಕನಸುಗಾರ
ಡಾ| ಅಬ್ದುಲ್‌ ಕಲಾಂ ಅವರು ದೇಶದ ಅಭಿವೃದ್ಧಿ ಕುರಿತು ಕಂಡ ಕನಸು ಇಂದು ನರೇಂದ್ರ ಮೋದಿ ಅವರಿಂದ ನನಸಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಅಂತಹ ಬದಲಾವಣೆಗಳನ್ನು ನಾನು ಗುರುತಿಸಿದ್ದೇನೆ. ಅಂತಾರಾಷ್ಟ್ರೀಯ ಬಾಂಧವ್ಯ ಗಟ್ಟಿಯಾಗಿ ಜಗತ್ತಿನಲ್ಲಿ ಸದೃಢ, ಸಶಕ್ತ, ಆರ್ಥಿಕ ಸ್ಥಿತಿವಂತ ಭಾರತ ತಲೆಯೆತ್ತಿ ನಿಲ್ಲುವಂತಾಗಿದೆ ಎಂದು ಹೆಗ್ಗಡೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next