Advertisement

ಡಾ.ರಾಜ್‌ಕುಮಾರ್‌ ರಂಗಮಂದಿರ ಉಳಿಸಿ

12:12 PM Jun 25, 2019 | Suhan S |

ಕುದೂರು: ಗ್ರಾಮದ ಶ್ರೀ ರಾಮಲೀಲಾ ಮೈದಾನ ದಲ್ಲಿರುವ ಡಾ.ರಾಜ್‌ಕುಮಾರ್‌ ರಂಗಮಂದಿರ ಕುಡುಕರ ಹಾಗೂ ಜೂಜುಕೋರರ ಅಡ್ಡೆಯಾಗಿದೆ. ಗೋಡೆಗಳ ಮೇಲೆ ತಂಬಾಕು ಜಗಿದು ಉಗಿಯಲಾಗಿದೆ. ಅಲ್ಲದೆ ರಂಗಮಂದಿರದ ಒಳಗೆ ಮೂತ್ರದ ವಾಸನೆ ಗಬ್ಬೆದ್ದು ನಾರುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳಾ ಸಂಘದ ಸದಸ್ಯರು ದೂರಿದ್ದಾರೆ.

Advertisement

ಮುಚ್ಚಿಕೊಂಡು ಸಭೆ ನಡೆಸುವ ದುಸ್ಥಿತಿ:ಗ್ರಾಮದ ಮಹಿಳಾ ಸ್ವಸಹಾಯ ಸಂಘದವರು ಹಾಗೂ ಧರ್ಮಸ್ಥಳ ಸಂಘದ ಮಹಿಳೆಯರು ವಾರದಲ್ಲಿ ಮೂರು ಬಾರಿ ಗುಂಪು ಚರ್ಚೆಗಳಿಗೆ ಇದೇ ರಂಗಮಂದಿರ ಬಳಸುತ್ತಾರೆ. ಇದರ ಒಳಗೆ ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಸಭೆ ನಡೆಸುವ ದುಸ್ಥಿತಿ ಇವರದ್ದಾಗಿದೆ ಮತ್ತು ಕ್ರೀಡಾ ಚಟುವಟಿಕೆಗಳು ಸ್ವಾತಂತ್ರ್ಯ ದಿನಾಚರಣೆ ಇದೇ ಸಭಾಂಗಣದಲ್ಲಿ ನಡೆಯುತ್ತದೆ. ಗ್ರಾಮದಲ್ಲಿ ಇದೊಂದೆ ಸಭಾಂಗಣ ಇರುವುದರಿಂದ ಇದನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಗ್ರಾಪಂಗೆ ಮನವಿ ಮಾಡಿದ್ದಾರೆ.

ಗ್ರಾಪಂ ವಿರುದ್ಧ ಆಕ್ರೋಶ: ಮಳೆಗಾಲದಲ್ಲಿ ರಂಗ ಮಂದಿರದ ಒಳಗಡೆ ನೀರು ಹರಿಯುವುದರಿಂದ ಸಭೆ ನಡೆಸಲು ಅನಾನುಕೂಲವಾಗುತ್ತದೆ. ಇದರ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಒತ್ತಾಯ: ರಂಗಮಂದಿರಕ್ಕೆ ಅಗತ್ಯ ಭದ್ರತೆ ಒದಗಿಸಬೇಕು. ಆದಷ್ಟು ಬೇಗ ಗೇಟ್‌ಗಳ ವ್ಯವಸ್ಥೆ ಮಾಡಬೇಕು. ಹಿಂಬದಿಯ ಗೋಡೆಗಳಿಗೆ ಬಾಗಿಲು ಅಳವಡಿಸಬೇಕು. ಗ್ರಾಮದ ಕಾರ್ಯ ಕ್ರಮಗಳಿಗೆ ರಂಗಮಂದಿರ ಸದ್ಬಳಕೆಯಾಗಬೇಕು. ರಾತ್ರಿ ವೇಳೆ ಪೊಲೀಸ್‌ ಗಸ್ತು ಹಾಕಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next