Advertisement

ಮಾತಿನಿಂದ ಗೋ ರಕ್ಷಣೆ ಅಸಾಧ್ಯ: ಶಂಕರಾನಂದ 

05:21 PM Apr 16, 2018 | |

ಹುಬ್ಬಳ್ಳಿ: ದೇಶಭಕ್ತಿ, ಧರ್ಮ ಪಾಲನೆ, ಗೋವು ರಕ್ಷಣೆ ಕೇವಲ ಬಾಯಿ ಮಾತಿನಲ್ಲಿದ್ದರೆ ಸಾಲದು ಕೃತಿಯಲ್ಲಿರಬೇಕು ಎಂದು ಆರ್‌ಎಸ್‌ಎಸ್‌ನ ಶಂಕರಾನಂದ ಹೇಳಿದರು.

Advertisement

ಉಣಕಲ್ಲ ಟಿಂಬರ್‌ ಯಾರ್ಡ್‌ನ ಪಾಟಿದಾರ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋಸೇವಾ ವಿಭಾಗದಿಂದ ನಡೆದ ಹುಬ್ಬಳ್ಳಿ ಮಹಾನಗರ ಗೋ ಜಪ ಸಮರ್ಪಣಾ ಮಹಾಯಜ್ಞದ ಸಮಾರೋಪದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬನಲ್ಲೂ ದೇಶಭಕ್ತಿ, ಧರ್ಮ ಪಾಲನೆ ಮಾಡುವ ಮನಸ್ಸಿದೆ. ಇನ್ನೊಬ್ಬರಿಗೆ ಉತ್ತಮವಾಗಿ ಸಂದೇಶವನ್ನು ಕೂಡ ನೀಡುತ್ತಾರೆ. ಆದರೆ ಬಹುತೇಕರು ಕಾರ್ಯರೂಪದಲ್ಲಿ ಅಳವಡಿಸಿಕೊಳ್ಳುವುದಿಲ್ಲ ಎಂದರು.

ರಾಷ್ಟ್ರದಲ್ಲಿ ನಡೆಯುತ್ತಿರುವ ಈ ಮಹಾಯಜ್ಞದ ಮೂಲಕ ಗೋ ರಕ್ಷಣೆ ಮಾಡುವ ಸಂದೇಶ ರವಾನೆಯಾಗಿದೆ. ಇಂತಹ ಯಾಗ ಯಜ್ಞಗಳನ್ನು ಮಾಡಿದಾಕ್ಷಣ ಗೋ ರಕ್ಷಣೆಯಾಗುತ್ತದೆ ಎಂದಲ್ಲ. ಈ ಕಾರ್ಯವನ್ನು ಇಷ್ಟಕ್ಕೆ ಸೀಮಿತ ಮಾಡದೆ ಪ್ರತಿಯೊಬ್ಬರು ಗೋ ರಕ್ಷಣೆ ಮಾಡುವ ಪಣ ತೊಡಬೇಕು. ದೇಶಭಕ್ತಿ, ಧರ್ಮ ಪಾಲನೆ, ಸತ್ಯದಂತಹ ಜೀವನದ ಮೌಲ್ಯಗಳನ್ನು ಸಾಧ್ಯವಾದಷ್ಟು ಕಾರ್ಯರೂಪಕ್ಕೆ ತರಬೇಕು ಎಂದರು.

ಜೀತಾಲಾಲ್‌ ಪಟೇಲ್‌ ಗೋ ಉತ್ಪನ್ನಗಳ ಬಳಕೆ ಹಾಗೂ ಅವುಗಳ ಪರಿಣಾಮಕಾರಿ ಶಕ್ತಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಮಾಹಿತಿ ನೀಡಿದರು. ವೈಷ್ಣೋದೇವಿ ಮಂದಿರದ ಶ್ರೀ ದೇವಪ್ಪಜ್ಜ, ಮಹಾಯಜ್ಞ ಕಾರ್ಯಕ್ರಮದ ಅಧ್ಯಕ್ಷ ಭವರಲಾಲ್‌ ಆರ್ಯ, ಉಪಾಧ್ಯಕ್ಷ ಜೇಠಾಲಾಲಜಿ
ಪಟೇಲ್‌, ಜಗದೀಶಗೌಡ ಪಾಟೀಲ, ಸಂಚಾಲಕ ಭರತ ಜೈನ್‌, ಸದಾನಂದ ಕಾಮತ, ಮೃತ್ಯುಂಜಯ ಬಡಗಣ್ಣವರ ಇನ್ನಿತರರಿದ್ದರು. 

ಸುಬ್ರಾಯ ಭಟ್‌ ನೇತೃತ್ವದಲ್ಲಿ ಜಪ ಯಜ್ಞ ಹಾಗೂ ಪೂರ್ಣಾಹುತಿ ನಡೆಯಿತು. ಪೂರ್ಣಾಹುತಿಯಲ್ಲಿ ಆರ್‌ಎಸ್‌ಎಸ್‌ನ ಮಂಗೇಶ ಭೇಂಡೆ, ಮಜೇಥಿಯಾ ಫೌಂಡೇಶನ್‌ನ ಜಿತೇಂದ್ರ ಮಜೇಥಿಯಾ ಸೇರಿದಂತೆ ಸಂಘ ಪರಿವಾರದ ಪ್ರಮುಖರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next