Advertisement
-ಕ್ಲೆನ್ಸಿಂಗ್ಪಾರ್ಲರ್ನಲ್ಲಿ ಮೊದಲಿಗೆ ಮುಖವನ್ನು ಸ್ವತ್ಛಗೊಳಿಸಲು ರಾಸಾಯನಿಕ ದ್ರಾವಣವನ್ನು ಬಳಸುತ್ತಾರಲ್ಲ; ಅದರ ಬದಲಿಗೆಹಾಲನ್ನು ಉಪಯೋಗಿಸಬಹುದು. ತಣ್ಣನೆಯ ಹಾಲನ್ನು ಹತ್ತಿಯಲ್ಲಿ ಅದ್ದಿ, ಮುಖಕ್ಕೆ ಮೃದುವಾಗಿ ಉಜ್ಜಿ. ಹೀಗೆ ಮಾಡಿದಾಗ, ಮುಖದ ಚರ್ಮ ಸ್ವತ್ಛವಾಗುತ್ತದೆ.
ಮುಖವನ್ನು ಸ್ಲಂಬ್ ಮಾಡುವುದು ಸತ್ತ ಚರ್ಮ ಮತ್ತು ಬ್ಲಾಕ್‌ಹೆಡ್ಸ್ ಹೋಗಲಾಡಿಸುವ ಸಲುವಾಗಿ. ಮರಳುಮರಳಾದ ಕ್ರೀಮ್‌ಅನ್ನು ಪಾರ್ಲರ್‌ಗಳಲ್ಲಿ ಸðಬಿಂಗ್‌ಗೆ ಬಳಸುತ್ತಾರೆ. ಸಕ್ಕರೆ, ಜೇನುತುಪ್ಪ ಮತ್ತು ಲಿಂಬೆರಸವನ್ನು ಮಿಶ್ರಣ ಮಾಡಿ, (ಸಕ್ಕರೆಯನ್ನು ಪೂರ್ತಿ ಕರಗಿಸಬೇಡಿ) ಮುಖಕ್ಕೆ ಉಜ್ಜಿ. ವೃತ್ತಾಕಾರವಾಗಿ ಮಸಾಜ್ ಮಾಡಿ. -ಸ್ಟೀಮಿಂಗ್
ಚರ್ಮದೊಳಗಿನ ಕಲ್ಮಷಗಳನ್ನು ತೆಗೆಯಲು ಕುದಿಯುವ ನೀರಿನ ಆವಿ ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಬರುವ ಆವಿಗೆ ಮುಖವೊಡ್ಡಿ. ಐದು ನಿಮಿಷದ ನಂತರ ಮುಖ ಬೆವರಿ ನೀರು ನೀರಾದಾಗ, ಟಿಶ್ಯೂ ಪೇಪರ್ ಅಥವಾ ಟವಲ್‌ನಿಂದ ಮುಖವನ್ನು ಒರೆಸಿಕೊಳ್ಳಿ.
Related Articles
ಫೇಶಿಯಲ್‌ನ ಕೊನೆಯ ಹಂತ ಫೇಸ್ ಮಾಸ್ಕ್. ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಅದನ್ನು ತಯಾರಿಸಬಹದು. ಒಂದು ಚಮಚ ಕೊಬ್ಬರಿ ಎಣ್ಣೆ, ಜೇನುತುಪ್ಪ, ಅರ್ಧ ಚಮಚ ಅರಿಶಿಣ ಪುಡಿ, ಲಿಂಬೆರಸ ಮತ್ತು ಮೊಸರನ್ನು ಬೆರೆಸಿ ಮಿಶ್ರಣ ಮಾಡಿ (ಮುಖಕ್ಕೆ ಹಚ್ಚಿಕೊಳ್ಳುವಷ್ಟು ತೆಳುವಾಗಿರಲಿ) ಮುಖಕ್ಕೆ ಹಚ್ಚಿ, ಒಣಗಿದ ನಂತರ ತಣ್ಣೀರಿನಲ್ಲಿ ಚೆನ್ನಾಗಿ ಮುಖ ತೊಳೆದುಕೊಳ್ಳಿ.
Advertisement