Advertisement

ಸರ್ಕಾರಿ ಶಾಲೆ ಉಳಿಸಿ-ಬೆಳೆಸಿ: ಮೀಶಿ

06:27 PM Dec 15, 2019 | Suhan S |

ಮೂಡಲಗಿ: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ನಗರ ಪ್ರದೇಶದ ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಹಾಗೂ ಜನಪ್ರತಿನಿಧಿಗಳ ಪಾತ್ರ ಅಮೂಲ್ಯವಾಗಿದೆ ಎಂದು ಮೂಡಲಗಿ ಸಿಆರ್‌ಪಿ ಕೆ.ಎಲ್‌.ಮೀಶಿ ಹೇಳಿದರು.

Advertisement

ನಗರದ ತಳವಾರ ತೋಟದ ಶಾಲೆಯಲ್ಲಿ ನಡೆದ ಸರಕಾರಿ ಶಾಲಾ ಮಕ್ಕಳಿಗೆ ಪುರಿ, ಪುಳಿಯೋಗರೆ ವಿಶೇಷ ಭೋಜನಕ್ಕೆ ಚಾಲನೆ ನೀಡಿ ಮಾತನಾಡಿ, ಶಾಲೆ ಮಕ್ಕಳ ಕಲಿಕೆ, ಪೂರಕ ವಾತಾವರಣ, ಪರಿಸರ ಪ್ರೇಮತ್ವ ಮೆಚ್ಚುಗೆ ನೀಡುವಂತಿದೆ. ಈ ಶಾಲೆಯ ಪ್ರಧಾನ ಗುರುಮಾತೆ ಆರ್‌.ಬಿ ಶೆಕ್ಕಿ ಅವರಿಗೆ ರಾಜ್ಯಮಟ್ಟದ ಉತ್ತಮ ನಲಿ-ಕಲಿ ಶಿಕ್ಷಕಿ

ಪ್ರಶಸ್ತಿ ದೊರೆತಿರುವುದು ದುಡಿಮೆಗೆ ತಕ್ಕ ಫಲ ಸಿಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.  ಈ ಸಂದರ್ಭದಲ್ಲಿ ಪ್ರಧಾನ ಗುರುಮಾತೆ ಆರ್‌.ಬಿ. ಶೆಕ್ಕಿ, ಎಸ್‌.ಎನ್‌. ದಬಾಡಿ, ಜಯಶ್ರೀ ಕಾಗಲಿ, ಕೆಂಪಣ್ಣ ಮಾವನೂರಿ, ಪಮ್ಮವ್ವ ತಳವಾರ, ಮಹಾದೇವಿ ಕುರಬಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next