Advertisement
ಬೃಹತ್ ಪ್ರತಿಭಟನ ಯಾತ್ರೆ ಯು ಪೊಯಿಸಾರ್ ಜಿಮಾVನದ ನೇತಾಜಿ ಸುಭಾಶ್ಚಂದ್ರ ಬೋಸ್ ಕ್ರೀಡಾಂಗಣದಿಂದ ಆರಂಭ ಗೊಂಡು ಸಾವಿರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ವೀರ ಸಾವರ್ಕರ್ ಉದ್ಯಾನವನ ಮೂಲಕ ಝಾನ್ಸಿ ರಾಣಿ ಜಾಗರ್ಸ್ ಪಾರ್ಕ್‌ಗೆ ಸಾಗಿತು. ಝಾನ್ಸಿ ರಾಣಿ ಉದ್ಯಾನವನ್ನು ಮುಚ್ಚುವ ನ್ಯಾಯಾಲಯದ ಆದೇಶದ ವಿರುದ್ಧ ಈ ಸಂಕಲ್ಪ ಯಾತ್ರೆಯನ್ನು ಆಯೋಜಿಸ ಲಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು, ತುಳು-ಕನ್ನಡಿಗರು ಪಾಲ್ಗೊಂಡಿದ್ದರು.
ಸ್ಥಳೀಯ ಸಮಾಜ ಸೇವಕ ಹಾಗೂ ಬಂಟರ ಸಂಘ ಮುಂಬಯಿ ಉನ್ನತ ಶಿಕ್ಷಣ ಸಂಸ್ಥೆಯ ನೂತನ ಯೋಜನೆಯ ಉಪ ಕಾರ್ಯಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿಯವರ ಹಾಗೂ ಇತರ ರಾಜಕೀಯ ಧುರೀಣರ ಸಹಕಾರದೊಂದಿಗೆ ನಮ್ಮ ನಡೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಉದ್ಯಾನವನವನ್ನು ಉಳಿಸುವ ಕಡೆ ಎಂಬ ಧ್ಯೇಯ ಘೋಷಣೆ ಯೊಂದಿಗೆ ಸಂಕಲ್ಪ ಯಾತ್ರೆಯು ನಡೆಯಿತು. ಕಬಳಿಸುವ ವ್ಯವಸ್ಥಿತ ಕಾರ್ಯ
ಇದೇ ಸಂದರ್ಭದಲ್ಲಿ ಮಾತನಾ ಡಿದ ಸಂಸದ ಗೋಪಾಲ್ ಶೆಟ್ಟಿ ಅವರು, ಕೆಲವೊಂದು ಬುದ್ಧಿ ಜೀವಿ ಗಳೆನಿಸಿಕೊಂಡ ದುಷ್ಟಶಕ್ತಿಗಳು ಸಮಾಜ ಸುಧಾರಣೆಯ ಹೆಸರಿನಲ್ಲಿ ಜನತೆಯನ್ನು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ತಪ್ಪುದಾರಿಗೆಳೆಯುವ ಸಂಚು ನಡೆಸುತ್ತಿರುವುದು ವಿಷಾದನೀಯ. ಇಂತಹ ಒಂದು ಸಮಾಜಘಾತುಕ ಶಕ್ತಿ ಬೊರಿವಲಿ ಪಶ್ಚಿಮದಲ್ಲಿರುವ ಭಾರತದ ಧೀಮಂತ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಹೆಸರಿನಲ್ಲಿ ನಿರ್ಮಿಸಲಾದ ಸುಂದರವಾದ ಉದ್ಯಾನವನ್ನು ಕೆಡವಲು ಮುಂದಾಗಿದೆ. ಅದಕ್ಕೆ ತಕ್ಕಂತೆ ನ್ಯಾಯಾಲಯದ ಆದೇಶ ಬಂದಿದೆ. ಈ ಪ್ರದೇಶದ ಅಭಿವೃದ್ಧಿಯನ್ನು ಸಹಿಸದ ಅವಕಾಶ ವಂಚಿತ ಇಲ್ಲಿನ ಸ್ವಾರ್ಥಿ ಬಿಲ್ಡರ್‌ಗಳು ಹಾಗೂ ಕೆಲ ವೊಂದು ಸಮಾಜಘಾತುಕ ಶಕ್ತಿಗಳು ಈ ಪ್ರದೇಶವನ್ನು ಕಬಳಿಸಲು ವ್ಯವಸ್ಥಿತವಾದ ಕಾರ್ಯ ತಂತ್ರಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಇವರುಗಳ ಕುತಂತ್ರಕ್ಕೆ ಪ್ರಸ್ತುತ ಬಂದಿರುವ ನ್ಯಾಯಾಲಯದ ಆದೇಶವಂತೂ ಇನ್ನಷ್ಟು ಕುಮ್ಮಕ್ಕನ್ನು ನೀಡಿದಂತಾಗಿದೆ. ನಾವು ಅಪ್ಪಟ ದೇಶಪ್ರೇಮಿಗಳಾಗಿದ್ದು, ದೇಶದ ಸಂವಿಧಾನವನ್ನು ಗೌರವಿಸುತ್ತೇವೆ. ನ್ಯಾಯಾಂಗ ವ್ಯವಸ್ಥೆಗೆ ಸಂಪೂರ್ಣ ತಲೆಬಾಗುತ್ತೇವೆ. ಆದರೆ ಈ ಉದ್ಯಾನವನ ಹಾಗೂ ಕ್ರೀಡೆಗಾಗಿ ಮೀಸಲಾಗಿರುವ ಜಮೀನಿನ ರಕ್ಷಣೆಗಾಗಿ ನಾವು ಸದಾ ಶಾಂತಿಯುತ ಹೋರಾಟವನ್ನು ಮಾಡುತ್ತಿರುತ್ತೇವೆ. ಇಂದಿನ ಸಂಕಲ್ಪ ಯಾತ್ರೆಗೆ ಉತ್ತಮವಾದ ಜನ ಬೆಂಬಲ ಸಿಕ್ಕಿದೆ. ನಮ್ಮ ಈ ಹೋರಾಟಕ್ಕೆ ಮತ್ತಷ್ಟು ಬಲಬಂದಂತಾಗಿದ್ದು, ಉದ್ಯಾವನದ ರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಯಾತ್ರೆಯು ಮತ್ತಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿದೆ ಎಂದು ನುಡಿದರು.
Related Articles
Advertisement
ತುಳು-ಕನ್ನಡಿಗ ಧುರೀಣರಾದ ಬಂಟರ ಸಂಘ ಮುಂಬಯಿ ಉನ್ನತ ಶಿಕ್ಷಣ ಸಮಿತಿಯ ನೂತನ ಯೋಜನೆಯ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆ, ಬಂಟರ ಸಂಘ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ಆಹಾರ್‌ನ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಮೀರಾರೋಡ್ ಬಿಜೆಪಿ ನಾಯಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಉದಯ ಶೆಟ್ಟಿ ಮೀರಾರೋಡ್ ಹಾಗೂ ವಿವಿಧ ತುಳು-ಕನ್ನಡ, ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ತುಳು-ಕನ್ನಡಿಗರು, ವಿವಿಧ ಭಾಷಿಗರು, ಕಾರ್ಯಕರ್ತರು ಉಪಸ್ಥಿತರಿದ್ದರು.
ತುಳು-ಕನ್ನಡಿಗರಿಗೂ ಉಪಯೋಗಉತ್ತರ ಮುಂಬಯಿ ಸಂಸದ ಗೋಪಾಲ್ ಶೆಟ್ಟಿ ಅವರು ಈಗಾಗಲೇ 20 ಉದ್ಯಾನವನಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಗಾರ್ಡನ್, ಪೊಯಿಸಾರ್ ಜಿಮ್‌ಖಾನ, ವೀರ ಸಾವರ್ಕರ್ ಉದ್ಯಾನವನ ಇನ್ನಿತರ ಉದ್ಯಾನಗಳು ಸೇರಿಕೊಂಡಿವೆ. ವಿಶೇಷವೆಂದರೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಉದ್ಯಾನವನ್ನು ತಲಾಬ್ ಆಗಿ ಪರಿವರ್ತಿಸಬೇಕು. ಅದು ಗಾರ್ಡನ್ ಆಗಿರುವುದು ಸರಿಯಲ್ಲ ಎಂಬುದರ ವಿರುದ್ಧ ಸಂಸದ ಗೋಪಾಲ್ ಶೆಟ್ಟಿ ಅವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಜಾನ್ಸಿ ರಾಣಿ ಲಕ್ಷ್ಮೀ ಬಾಯಿ ಉದ್ಯಾನವನದಿಂದ ಜನತೆಗೆ ಸಾಕಷ್ಟು ಉಪಯೋಗಗಳಾಗುತ್ತಿದ್ದು, ಇಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೂ ಇದರ ಉಪಯೋಗ ಪಡೆಯುತ್ತಿದ್ದಾರೆ.