ಹೆಬ್ರಿ: ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ನೀಡಿದಾಗ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಸಾಧ್ಯ. ಜೀವನ ಮೌಲ್ಯಗಳನ್ನು ಬಾಲ್ಯದಿಂದಲೇ ಪಡೆಯಲು ಇಂತಹ ಧಾರ್ಮಿಕ ಶಿಬಿರದ ಅವಶ್ಯಕತೆ ಇದೆ.ಇದನ್ನು ಪಡೆದುಕೊಂಡು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯಕರ್ತವ್ಯಎಂದು ಹೆಬ್ರಿ ರಾಘವೇಂದ್ರ ಮಠದ ಧರ್ಮದರ್ಶಿ ವೇದಮೂರ್ತಿ ಗೋಪಾಲ ಆಚಾರ್ಯ ತಿಳಿಸಿದರು.
ಅವರು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ರಾಘವೇಂದ್ರ ಮಠದ ಸಂಯುಕ್ತ ಆಶ್ರಯದಲ್ಲಿ ಹೆಬ್ರಿ ರಾಘವೇಂದ್ರ ಮಠದಲ್ಲಿ 11 ದಿನ ನಡೆಯುವ ಧಾರ್ಮಿಕ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿ ಉಳಿಯಲು ಎಲ್ಲಾ ಮಠ, ದೇವಸ್ಥಾನಗಳು ಧಾರ್ಮಿಕ ಶಿಕ್ಷಣ ಕೇಂದ್ರವಾಗಬೇಕು. ದೆ„ನಂದಿನ ಆಚರಣೆಗಳಲ್ಲಿ ಸಂಧ್ಯಾವಂದನೆ, ದೇವರ ಪೂಜೆ ಇತ್ಯಾದಿಗಳನ್ನು ಅನುಷ್ಠಾನಗೊಳಿಸಿದಾಗ ಧಾರ್ಮಿಕ ಜಾಗೃತಿಯೊಂದಿಗೆ ಜೀವನ ಸಾರ್ಥಕಗೊಳ್ಳುವುದು ಎಂದು ಮಡಾಮಕ್ಕಿಯ ನಿವೃತ್ತ ಶಿಕ್ಷಕ ವಿದ್ವಾನ್‌ಅನಂತ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ವಿದ್ಯಾಪೀಠದ ಪ್ರಾಧ್ಯಾಪಕ ಹೃಷಿಕೇಷ ,ದಾಮೋದರ , ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಶಿಕ್ಷಕ ಪ್ರಕಾಶ ಭಟ್, ಶ್ರೀನಿವಾಸ ಭಟ್, ಗೋವಿಂದ ಆಚಾರ್ಯ ಪೋಷಕರಾದ ಸೌಭಾಗ್ಯ , ಲಲಿತ, ವೀಣಾ, ಶಾಂತ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಸದಸ್ಯ ಗಿಲ್ಲಾಳಿ ಪದ್ಮನಾಭ ಆಚಾರ್ಯ ಸ್ವಾಗತಿಸಿ, ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್‌ಕಾರ್ಯಕ್ರಮ ನಿರೂಪಿಸಿ, ಕಬ್ಬಿನಾಲೆ ರಾಮಚಂದ್ರ ಭಟ್ ವಂದಿಸಿದರು.