Advertisement

ಅರಣ್ಯವಾಸಿಗಳನ್ನು ಉಳಿಸಿ- ಜಾಥಕ್ಕೆ ‘ಹೋರಾಟ- ವಾಹನ’ ಸಿದ್ಧ

03:34 PM Feb 26, 2022 | Team Udayavani |

ಶಿರಸಿ: ರಾಜ್ಯಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನು ಉಳಿಸಿ- ಜಾಥಕ್ಕೆ ಸಂಘಟಕರು ವಿಶೇಷವಾಗಿ ಅಲಂಕಾರದ ವಾಹನ ಸಿದ್ಧವಾಗಿದೆ.

Advertisement

ಅರಣ್ಯವಾಸಿ ಹೋರಾಟ ಮತ್ತು ಘೋಷಣೆ ಚಿತ್ರ ಹೊಂದಿರುವ ಹಸಿರು, ಬಿಳಿ ಬಣ್ಣಗಳಿಂದ ವಾಹನದ ಹೊರ ಮತ್ತು ಒಳಾಂಗಣ ಸಿದ್ಧಪಡಿಸಲಾಗಿದೆ.

ಪ್ರಥಮ ಹಂತದಲ್ಲ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹಿನಿ 500 ಹಳ್ಳಿಗಳಿಗೆ ಮುಂದಿನ 30 ದಿನಗಳಲ್ಲಿ ತಿರುಗಾಟ ಮಾಡಲಿದ್ದು ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹಿನಿ ಮೂಲಕ ಕಾನೂನು ಜಾಗೃತೆ ಮೂಡಿಸಲು ಸಂಘಟಕರು ನಿರ್ಧರಿಸಿದ್ದಾರೆ.

ಹೋರಾಟಕ್ಕೆ ಗಟ್ಟಿತನ ;

ಇತ್ತೀಚಿನ ಸುಫ್ರೀಂ ಕೋರ್ಟ ನ್ಯೂಡೆಲ್ಲಿಯ ಬೇರೆ ಬೇರೆ ರಾಜ್ಯಕ್ಕೆ ಸಂಬಂಧಿಸಿದ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ತೀರ್ಮಾನದಿಂದ ಅರಣ್ಯವಾಸಿಗಳು ವಿಚಲಿತ ಹಾಗೂ ಆತಂಕಕ್ಕೆ ಒಳಗಾಗಿರುವ ಹಿನ್ನೆಲೇಯಲ್ಲಿ ಸರಕಾರದ ಮೇಲೆ ಹೇಚ್ಚಿನ ಒತ್ತಡ ಹೇರಲು ಮತ್ತುಹೋರಾಟಕ್ಕೆ ಇನ್ನಷ್ಟು ಗಟ್ಟಿತನ ತರುವ ಉದ್ದೇಶದಿಂದ ‘ಹೋರಾಟ ವಾಹನ’ ಮೂಲಕ ಹೋರಾಟಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next