Advertisement

ಸಮುದಾಯ ಭವನಗಳನ್ನು ಉಳಿಸಿ

01:03 PM May 22, 2017 | |

ತಿ.ನರಸೀಪುರ: ಶಾಸಕರು ಮತ್ತು ಸಂಸದರ ಅನುದಾನದಲ್ಲಿ ನಿರ್ಮಾಣಗೊಳ್ಳುವ ಸಮುದಾಯ ಭವನಗಳು ನಿರುಪಯುಕ್ತವಾಗದೆ ಜನಸಮುದಾಯದ ಪ್ರಗತಿಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳಬೇಕು ಎಂದು ಕಾಂಗ್ರೆಸ್‌ ಯುವ ಮುಖಂಡ ಸುನೀಲ್‌ ಬೋಸ್‌ ಹೇಳಿದರು.

Advertisement

ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವಿಶೇಷ ಘಟಕ ಅನುದಾನ 30 ಲಕ್ಷ ರೂಗಳ ವೆಚ್ಚದ ಸಿಮೆಂಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ 4 ಲಕ್ಷ ರೂಗಳ ವೆಚ್ಚದ ನಾಯಕ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯ ನಂತರ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ನಾಮಫ‌ಲಕ ಅನಾವರಣಗೊಳಿಸಿ ಮಾತನಾಡಿ, ಸಮುದಾಯ ಭವನಗಳನ್ನು ಪಾಳು ಬಿಡುವ ಬದಲು ಯುವ ಸಮೂಹ ಅಥವಾ ವಿದ್ಯಾರ್ಥಿಗಳ ಅಧ್ಯಯನಕ್ಕೆ ಯೋಗ್ಯವಾದ ತಾಣಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.

ತಾಲೂಕಿನಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸಮುದಾಯ ಭವನ ಅಗತ್ಯತೆ ಇರುವುದನ್ನು ಅರಿತು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ, ಶಾಸಕರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೆರವು ನೀಡಿದ್ದಾರೆ. ಸಮುದಾಯ ಸಂಘಟನೆ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೂ ಭವನಗಳನ್ನು ಬಳಕೆ ಮಾಡಿಕೊಂಡು ಸಾಮಾಜಿಕ ಅಭಿವೃದ್ಧಿ ಸಾಧಿಸಬೇಕು ಎಂದು ಕರೆ ನೀಡಿದರು.

ತಾಲೂಕು ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ ಮಾತನಾಡಿ, ಗಡಿಗ್ರಾಮವಾಗಿ ಹಿಂದುಳಿದಿರುವ ಕೊಳತ್ತೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸಚಿವರು ಹೆಚ್ಚು ಒತ್ತನ್ನು ನೀಡಿದ್ದು, ದೊಡ್ಡಕೆರೆ ಜೀರ್ಣೋದ್ಧಾರಕ್ಕೆ 4 ಕೋಟಿ ರೂಗಳ ಅನುದಾನ ಮಂಜೂರು ಮಾಡಿದ್ದಾರೆ. ವಿಶೇಷ ಘಟಕ ಯೋಜನೆಯಡಿ ಎಸ್ಸಿ/ಎಸ್ಟಿ ಜನರು ವಾಸಿಸುವ ರಸ್ತೆಗಳನ್ನು ಸಿಮೆಂಟ್‌ ರಸ್ತೆಗಳಾಗಿ ಪರಿವರ್ತಿಸಲಾಗಿದೆ. ಪ್ರಗತಿಯಲ್ಲಿರುವ ಗಾಣಿಗ ಸಮುದಾಯ ಭವನಕ್ಕೂ ನೆರವು ನೀಡಿದ್ದಾರೆ ಎಂದು ತಿಳಿಸಿದರು.

ಸಿಮೆಂಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ತಾಪಂ ಅಧ್ಯಕ್ಷ ಸಿ.ಚಾಮೇಗೌಡ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಕೆಪಿಸಿಸಿ ಎಸ್ಟಿ ಘಟಕ ಉಪಾಧ್ಯಕ್ಷ ಹೊನ್ನನಾಯಕ, ಜಿಪಂ ಸದಸ್ಯ ಟಿ.ಹೆಚ್‌.ಮಂಜುನಾಥನ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಕೆ.ವಜ್ರೆàಗೌಡ, ತಾಪಂ ಸದಸ್ಯ ರಾಮಲಿಂಗಯ್ಯ, ಗ್ರಾಪಂ ಸದಸ್ಯ ಹಾಗೂ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಮಾರ, ಗ್ರಾಪಂ ಮಾಜಿ ಅಧ್ಯಕ್ಷ ಆರ್‌.ಸೋಮಣ್ಣ, ಮಾಜಿ ಉಪಾಧ್ಯಕ್ಷ ಕೆ.ಶಂಕರ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್‌.ವಿನಯ್‌ಕುಮಾರ್‌,

Advertisement

ಜಿಪಂ ಸಹಾಯಕ ಕಾರ್ಯ ಪಾಲಕ ಅಭಿಯಂತರ ಎಸ್‌.ಸಿದ್ದರಾಜು, ಸಹಾಯಕ ಎಂಜಿನಿಯರ್‌ ನಂಜುಂಡಯ್ಯ, ಸೆಸ್ಕ್ ಎಇಇ ಎ.ಎಂ.ಶಂಕರ್‌, ಯಜಮಾನರಾದ ನಂಜುಂಡಶೆಟ್ಟರು, ಸ್ವಾಮಿ, ನಾಗೇಗೌಡ, ರಾಜಮಣಿ, ರಾಜೇಂದ್ರ,ಸಟ್ಟಯ್ಯ, ಬಸವರಾಜು, ಅಂಗಡಿ ಸಿದ್ದರಾಜು, ಪಟೇಲ್‌ ಸ್ವಾಮಿ, ಮಹದೇವ, ಮುಖಂಡರಾದ ಮಹದೇವಸ್ವಾಮಿ, ಕಾರಯ್ಯ, ಬೋಳಕಯ್ಯ, ಮುಡುಕನಪುರ ಬಸವರಾಜು, ಹಲವಾರ ಚಂದ್ರಪ್ಪ, ಎಂ.ಜಿ.ಗೋವಿಂದ, ರಾಜುಬಾವಿಕರ, ನಂಜುಂಡ, ಬನ್ನೂರು ಶಿವು ಸೇರಿದಂತೆ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next