Advertisement

ಮನೆಯಿಂದಲೇ ಸಂಸ್ಕೃತಿ ಉಳಿಸಿ, ಬೆಳೆಸಿ : ಬೊಳ್ಳಜಿರ ಬಿ.ಅಯ್ಯಪ್ಪ

11:29 PM May 20, 2019 | sudhir |

ಮಡಿಕೇರಿ :ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯನ್ನು ಹಿರಿಯರು ಮಕ್ಕಳಿಗೆ ಮನೆಯಿಂದಲೇ ಕಲಿಸಿದರೆ ಅದು ಉಳಿಯಲು ಸಾಧ್ಯ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

ನಾಪೆೊàಕ್ಲು ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಆಟ್‌ಪಾಟ್‌ ಪಡಿಪು ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕೊಡವ ಭಾಷೆಯನ್ನು ಬೆಳೆಸಲು ಹಿರಿಯರು ಮಕ್ಕಳಿಗ ಒತ್ತಾಸೆಯನ್ನು ನೀಡಬೇಕೆಂದ ಅವರು ಮಕ್ಕಳು ತಪ್ಪು ದಾರಿ ಹಿಡಿಯಲು ಫೊಷಕರು ಸಹ ಕಾರಣಾರಾಗುತ್ತಾರೆ ಏಕೆಂದರೆ ಮಕ್ಕಳ ಮೇಲಿನ ಹೆಚ್ಚಿನ ಮಮತೆ ಅವರನ್ನು ಖನ್ನರನ್ನಾಗಿಸುತ್ತದೆ ಆದುದರಿಂದ ಮನೆಯಲ್ಲಿ ಮಕ್ಕಳಿಗೆ ಉತ್ತಮ ವಾತವರಣದಲ್ಲಿ ಒಳ್ಳೆಯ ಗುಣ ನಡತೆ ಬಗ್ಗೆ ತಿಳಿಹೇಳ ಬೇಕೆಂದರು.

ಯಾವುದೆ ಮನುಷ್ಯನಗಲಿ, ಪ್ರಾಣಿಯಾಗಲಿ ಚಿಕ್ಕಂದಿನಿಂದಲೇ ಅವರಿಗೆ ಒಳ್ಳೆಯದನ್ನು ಕಲಿತರೇ ಅದು ಕೊನೆಯವರೆಗೂ ಉಳಿಯಲು ಸಾಧ್ಯ, ಮಕ್ಕಳಿಗೆ ಸಂಸ್ಕ$›ತಿ ಮಂದ್‌ ಮಾನಿಯ ಬಗ್ಗೆ ಹಿರಿಯರು ತಿಳಿ ಹೇಳಬೇಕೆಂದ ಅವರು ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಅವರನ್ನು ತಿದ್ದಲು ಸಾದ್ಯವಿಲ್ಲ ಇದನ್ನು ಪ್ರತಿಯೊಬ್ಬರೂ ಅರಿಯ ಬೇಕೆಂದರು.

ಯಾವುದೇ ಒಂದು ಸ್ವರ್ಧೆಯಲ್ಲಿ ಬಹುಮಾನ ಗಳಿಸಲು ಮಾತ್ರ ಭಾಗವಹಿಸುವುದು ಸರಿಯಲ್ಲ ಅವಕಾಶಗಳು ಸಿಗುವಾಗ ಅದನ್ನು ಬಳಸಿಕೊಂಡು ಮುಂದೆ ಬರಬೇಕೆಂದು ಹೇಳಿದರು. ನಮ್ಮ ಮಕ್ಕಳು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಅಂತಹ ಸಾಧಕರಿಗೆ ಪೋ›ತ್ಸಾಹ ಸಿಗುತ್ತಿಲ್ಲ ಎಂದ ಅವರು ಕೊಡವ ಮಕ್ಕಡ ಕೂಟವು ಇಂದು ಅಂಥವರನ್ನು ಗುರುತಿಸಿ ಪೋ›ತ್ಸಾಹಿಸುವ ಕೆಲಸ ಮಾಡಿದೆ ಮುಂದೆ ಇದನ್ನು ಮುಂದು ವರೆಸಿಕೊಂಡು ಹೋಗಲಾಗುವುದು ಎಂದರು.

Advertisement

ನಂತರ ಮಾತನಾಡಿದ ಉಳುವಂಗಡ ಕಾವೇರಿ ಉದಯ ನನ್ನ ಎರಡು ಪುಸ್ತಕವನ್ನು ಇಲ್ಲಿ ಬಿಡುಗಡೆಗೊಳಿಸಲು ಸಹಕರಿಸಿ ಕೊಡವ ಮಕ್ಕಟ ಕೂಟದ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು
ಪುಸ್ತಕ ರಚಿಸಲು ಹಣದ ಸಹಾಯ ಮಾಡಿದ ದಾನಿಗಳಿಗೆ ಅವರು ಕೃತಜ`ತೆ ಸಲ್ಲಿಸಿದರು.

ಈ ಸಂದರ್ಭ ಭಾರತೀಯ ಹಾಕಿ ಕ್ಯಾಂಪ್‌ಗೆ, ಆಯ್ಕೆಯಾದ ಕುಂಡೊÂàಳಂಡ ಕಾರ್ಯಪ್ಪ, ರಾಷ್ಟ್ರೀಯ ಬಾಸ್ಕೆಟ್‌ ಬಾಲ್‌ ಆಟಗಾರ್ತಿ ಕೆಲೇಟಿರ ಹರ್ಷಿತ, ಪೆನ್ಸಿಂಗ್‌ ಚಾಂಪಿಯನ್‌ ಕೈಬುಲೀರ ಕುಟ್ಟಪ್ಪ ಮತ್ತು ಥ್ರೋಬಾಲ್‌ ಆಟಗಾರ್ತಿ ಬೊಪ್ಪಂಡ ರೀನಾರವರನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು.

ಕುಂಡೊÂàಳಂಡ ಕಾರ್ಯಪ್ಪ ಪರ ಅವರ ತಂದೆ ತಿಮ್ಮಯ್ಯ ಮತ್ತು ಕೆಲೇಟಿರ ಹರ್ಷಿಕ ಪರ ಅವರ ತಾಯಿ ಮಾಲ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಮಾರಂಃಭದಲ್ಲಿ ಲ್ಲಿ ಕೊಂಡೀರ ನಾಣಯ್ಯ, ಉಧ್ಯಮಿ, ಅರೆಯಡ ಪವಿನ್‌ ಪೊನ್ನಣ್ಣ, ಸನ್ಮಾನ ಸ್ವೀಕರಿಸಿದ ಬೊಪ್ಪಂಡ ರೀನಾ ಮತ್ತು ಉಮ್ಮತ್ತಾಟ್‌ ತರಬೇತುದಾರರಾದ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next