Advertisement

ತುಮಕೂರು ವಿವಿಯಲ್ಲಿ ವೀರ ಸಾವರ್ಕರ್‌ ಅಧ್ಯಯನ ಪೀಠ

09:44 PM Aug 27, 2022 | Team Udayavani |

ಬೆಂಗಳೂರು/ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅಧ್ಯಯನ ಪೀಠ ಆರಂಭಕ್ಕೆ ತುಮಕೂರು ವಿವಿಯ ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

Advertisement

ಸಿಂಡಿಕೇಟ್‌ ಸದಸ್ಯ ವಿನಯ್‌ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ವಿವಿಯಲ್ಲಿ ಉಪಕುಲಪತಿ ವೆಂಕಟೇಶ್ವರಲು ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಈ ಬಗ್ಗೆ ವಿನಯ್‌ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲದೇ ಪ್ರಾರಂಭಿಕವಾಗಿ ಪೀಠ ಚಾಲನೆ ನೀಡಲು ವಿನಯ್‌ ಅವರು ಒಂದು ಲಕ್ಷ ರೂ.ಗಳನ್ನು ಠೇವಣಿ ಇರಿಸಿದ್ದಾರೆ.

ಟ್ವೀಟರ್‌ನಲ್ಲಿ ವಾಗ್ಧಾಳಿ: ತುಮಕೂರು ವಿವಿಯಲ್ಲಿ ಸಾವರ್ಕರ್‌ ಅಧ್ಯಯನ ಪೀಠ ಸ್ಥಾಪಿಸಲು ಮುಂದಾಗಿರುವ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್‌ ಟ್ವೀಟರ್‌ನಲ್ಲಿ ವಾಗ್ಧಾಳಿ ನಡೆಸಿದೆ.

ಪೀಠದಲ್ಲಿ ಅಧ್ಯಯನ ವಿಷಯಗಳೇನು? ಕ್ಷಮಾಪಣಾ ಪತ್ರಗಳು ಬರೆದಿದ್ದು ಯಾಕೆ? ಕ್ವಿಟ್‌ ಇಂಡಿಯಾ ಚಳವಳಿ ವಿರೋಧಿಸಿದ್ದು, ಮುಸ್ಲಿಂ ಲೀಗ್‌ ಜತೆ ಸೇರಿ ಪ್ರಾಂತೀಯ ಸರ್ಕಾರ ರಚಿಸಿದ್ದು, ನೇತಾಜಿ ವಿರುದ್ಧ ಬ್ರಿಟಿಷರಿಗೆ ಸಹಾಯ, ಬ್ರಿಟಿಷರಿಂದ ಪೆನ್ಶನ್‌ ಪಡೆದಿದ್ದು ಈ ಎಲ್ಲದರ ಬಗ್ಗೆ ಅಧ್ಯಯನವಾಗಲಿ ಎಂದು ಲೇವಡಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next