ಅಕೋಲಾ: ಹಿಂದುತ್ವ ಪ್ರತಿ ಪಾದಕ ವಿನಾಯಕ ಸಾವರ್ಕರ್‌ರವರ ಸಂಸ್ಕಾರವೇ ಸಮರ್ಥ ರಾಷ್ಟ್ರ ನಿರ್ಮಾಣದ ಅಡಿಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಅಕೋಲಾದಲ್ಲಿ ಬುಧವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಮೋದಿ, “”ಸಾವರ್ಕರ್‌ರವರ ಸಂಸ್ಕಾರದಿಂದಲೇ ಬಿಜೆ ಪಿಯು ಸಮರ್ಥ ರಾಷ್ಟ್ರ ನಿರ್ಮಿಸಲು ಬೇಕಾದ ರಾಷ್ಟ್ರೀಯತೆಯನ್ನು ಮೈಗೂಡಿಸಿ ಕೊಂಡಿದೆ” ಎಂದು ತಿಳಿಸಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ, ಸಾವರ್ಕರ್‌ರಿಗೆ ಭಾರತ ರತ್ನ ನೀಡುವಂತೆ ಶಿಫಾರಸು ಮಾಡ ಲಾಗುತ್ತದೆ ಎಂದು ಘೋಷಿಸಲಾಗಿದೆ. ಅದನ್ನು ವಿರೋಧ ಪಕ್ಷಗಳು ಟೀಕಿಸಿದ್ದವು. ಈ ಹಿನ್ನೆಲೆ ಯಲ್ಲಿ, ಪ್ರಧಾನಿಯವರಿಂದ ಈ ಸಮ ರ್ಥನೆ ವ್ಯಕ್ತವಾಗಿದೆ. ಇನ್ನು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಮಹಾರಾಷ್ಟ್ರ ದಲ್ಲಿನ ಚುನಾವಣಾ ಪ್ರಚಾರದ ವೇಳೆ ಪ್ರಸ್ತಾ ಪಿಸಿದರೆ, ಮಹಾರಾಷ್ಟ್ರಕ್ಕೂ, ಕಾಶ್ಮೀ ರಕ್ಕೂ ಏನು ಸಂಬಂಧ ಎಂದು ವಿರೋಧ ಪಕ್ಷಗಳು ಪ್ರಶ್ನಿಸು ತ್ತಿವೆ. ಅವರ ಈ ಪ್ರಶ್ನೆ, ನಿರ್ಲ ಜ್ಜೆಯ ಪ್ರತೀಕ. ಇಂಥ ಪ್ರಶ್ನೆ ಕೇಳುವವರು ಎಲ್ಲ ದರೂ ಹೋಗಿ ಸಾಯಲಿ ಎಂದು ಮೋದಿ ಗುಡುಗಿದರು. ಜಮ್ಮು ಕಾಶ್ಮೀರದ ವರೂ, ಮಹಾರಾಷ್ಟ್ರದವ ರಂತೆ ಭಾರತ ಮಾತೆಯ ಮಕ್ಕಳೇ ಆಗಿದ್ದಾರೆ ಎಂದರು.
ಠಾಕ್ರೆಗೆ ದತ್ ಬೆಂಬಲ: ಮುಂಬಯಿನ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಶಿವಸೇನೆ ನಾಯಕ ಆದಿತ್ಯ ಠಾಕ್ರೆಗೆ ಬಾಲಿವುಡ್ ನಟ ಸಂಜಯ್ ದತ್ ಬೆಂಬಲ ಸೂಚಿಸಿದ್ದಾರೆ. ದೇಶಕ್ಕೆ ಯುವ ನಾಯಕರ ಅಗತ್ಯವಿದ್ದು, ಆದಿತ್ಯ ಅವರು ಭಾರೀ ಮತಗಳ ಅಂತರದಿಂದ ಗೆದ್ದು ಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ ದತ್.