Advertisement

ಕುಟುಂಬಸ್ಥರನ್ನು ಸೇರಿದ ತಾಯಿ-ಮಕ್ಕಳು

05:10 PM Apr 07, 2020 | Naveen |

ಸವಣೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಿಲುಕಿ ನಿರ್ಗತಿಕರ ಕುಟೀರ ಸೇರಿದ್ದ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಜೆಸಿಐ ನಮ್ಮ ಸವಣೂರು ಘಟಕದ ಸಹಕಾರದಲ್ಲಿ ಹರಿಹರದಲ್ಲಿರುವ ಕುಟುಂಬಸ್ಥರನ್ನು ಸೇರಿಕೊಳ್ಳಲು ಕಳುಹಿಸಲಾಯಿತು.

Advertisement

ಮಾ. 29ರಂದು ಪಟ್ಟಣದಲ್ಲಿ ಆಹಾರಕ್ಕಾಗಿ ಪರದಾಡುತ್ತಿದ್ದ ಹೇಮವ್ವ ಲಮಾಣಿ (37), ರವಿ (15) ಹಾಗೂ ಸೋಮಪ್ಪ (12) ಅವರನ್ನು ತಾಲೂಕಾಡಳಿತ ವತಿಯಿಂದ ತೆರೆಯಲಾಗಿರುವ ನಿರ್ಗತಿಕರ ಕುಟೀರಕ್ಕೆ ಸೇರಿಸಲಾಗಿತ್ತು. ಹೇಮವ್ವ ಲಮಾಣಿ ಕೋರಿಕೆಯಂತೆ ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳು ತಾಲೂಕು ಆಡಳಿತ ಪರವಾನಗಿ ಪಡೆದು ಸಮಾಜ ಸೇವಕ ಬಾಹುದ್ದೀನ್‌ ಇನಾಮದಾರ ಹಾಗೂ ವಿಜಯ ಬೀಡಿ ಕಂಪನಿ ಮಾಲೀಕರ ಸಹಾಯದೊಂದಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಹಾಗೂ ಜೀವನಾವಶ್ಯಕ ವಸ್ತುಗಳನ್ನು ನೀಡಿ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಖಾಸಗಿ ವಾಹನದಲ್ಲಿ ಹರಿಹರದಲ್ಲಿರುವ ಕುಟುಂಬಸ್ಥರ ಬಳಿ ಬಿಟ್ಟು ಬರಲಾಯಿತು.

ಗ್ರಾಮಲೆಕ್ಕಾಧಿಕಾರಿ ರವಿ ಮಾಚಕನವರ, ಜೆಸಿಐ ನಮ್ಮ ಸವಣೂರು ಘಟಕದ ಪದಾ ಧಿಕಾರಿಗಳಾದ ಆನಂದ ಮತ್ತಿಗಟ್ಟಿ, ಗಣೇಶಗೌಡ ಪಾಟೀಲ, ಸತೀಶ ಪೂಜಾರ, ನಿಂಗಪ್ಪ ನಾಗನೂರ, ಈರಯ್ಯ ಹಿರೇಮಠ, ಸಾಧಿಕ ಅಹ್ಮದ, ಮನಿಯಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next