Advertisement
ಸರಕಾರವು ಹಲವು ಉದ್ದೇಶಗಳಿಗೆ ವಿವಿಧೆಡೆ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಬಳಿಕ ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಹಾಗೇ ಬಿಟ್ಟುಬಿಡುವ ಮೂಲಕ ಪಾಳು ಬೀಳುವಂತಾಗಿದೆ. ಸರ್ವೆ ನಂಬರ್ 161/1ಸಿ1(ಪಿ1) ಇದರಲ್ಲಿ 1.39 ಎಕ್ರೆ ಸರಕಾರಿ ಜಮೀನು ಇದ್ದು, ಅದರಲ್ಲೇ ಈ ಕಟ್ಟಡ ಇದೆ.
ಇಲ್ಲಿನ ಕೃಷಿ ಇಲಾಖೆಯ 2 ಕಟ್ಟಡಗಳು ಉಪಯೋಗವಿಲ್ಲದೆ ಪಾಳು ಬಿದ್ದಿದ್ದು, ಉಪಯೋಗ ಶೂನ್ಯವಾಗಿವೆ.ಆದರೆ ಇಂತಹ ಕಟ್ಟಡಗಳನ್ನು ಸದುಪಯೋಗವಾಗುವಂತೆ ಮಾಡುವಲ್ಲಿ ಇಲಾಖೆ ಆಸಕ್ತಿ ವಹಿಸುತ್ತಿಲ್ಲ. ಈ ಕಟ್ಟಡ ಹುಳು ಹುಪ್ಪಟೆಗಳ ವಾಸಸ್ಥಾನವಾಗಿದೆ. ಕಟ್ಟಡದ ಸುತ್ತಲೂ ಪೊದೆಗಳು ಆವರಿಸಿ ಪಾಳು ಬಿದ್ದಂತಾಗಿದೆ. ಖಾಸಗಿ ರಸ್ತೆ ನಿರ್ಮಾಣ
ಸರಕಾರಿ ಜಾಗದಲ್ಲಿರುವ ಈ 2 ಕಟ್ಟಡಗಳ ಮಧ್ಯೆ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿದ್ದಾರೆ. ಈ ಕುರಿತೂ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಮಾತು ಕೇಳಿಬಂದಿದೆ.
Related Articles
Advertisement
ದಾಸ್ತಾನಿಗೆ ಅನ್ಯ ಸ್ಥಳ ಕೃಷಿ ಇಲಾಖೆಯಿಂದ ಸಾರ್ವಜನಿಕರಿಗೆ ಕೃಷಿಕರಿಗೆ ವಿತರಿಸುವ ಸುಣ್ಣ, ಪೈಪು ಸಹಿತ ವಿವಿಧ ಪರಿಕರಗಳನ್ನು ಇತರ ಖಾಸಗಿ ಕಟ್ಟಡದಲ್ಲಿ ತಂದು ಇಡಲಾಗುತ್ತಿದೆ. ಆದರೆ ಇಲಾಖೆಯದ್ದೇ ಕಟ್ಟಡ ಇರುವಾಗ ಅದನ್ನು ದುರಸ್ತಿಗೊಳಿಸಿ ಅದರಲ್ಲೇ ದಾಸ್ತಾನು ಇರಿಸದೆ ಬೇರೆ ಕಟ್ಟಡದಲ್ಲಿ ಇರಿಸಲಾಗುತ್ತಿದೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ
ಕಟ್ಟಡ ಮತ್ತು ಜಾಗವನ್ನು ಗ್ರಾ.ಪಂ.ಗೆ ಹಸ್ತಾಂತರಿಸಿದರೆ ದುರಸ್ತಿ ಮಾಡಿ ವಿವಿಧ ಉದ್ದೇಶಗಳಿಗೆ ಬಳಸಬಹುದು. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಗ್ರಾ.ಪಂ.ನಿಂದ ನಿರ್ಣಯ ಕೈಗೊಳ್ಳುತ್ತೇವೆ. ಕೃಷಿ ಇಲಾಖೆಯ ಕಟ್ಟಡದ ಮಧ್ಯೆ ಸರಕಾರಿ ಜಾಗದಲ್ಲಿ ಖಾಸಗಿಯವರು ರಸ್ತೆ ನಿರ್ಮಾಣ ಮಾಡಿದ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಈವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
– ಸತೀಶ್ ಬಲ್ಯಾಯ,
ಸವಣೂರು ಗ್ರಾ.ಪಂ. ಸದಸ್ಯರು ವಿಶೇಷ ವರದಿ