ಸವಣೂರು: ಅಧಿಕಾರ ವಿಕೇಂದ್ರೀಕ ರಣದ ಪ್ರಕ್ರಿಯೆಯಲ್ಲಿ ಸ್ಥಳಿಯಾಡಳಿತ ಗ್ರಾ.ಪಂ. ಹೆಚ್ಚು ಮಹತ್ವ ಪಡೆದಿದೆ. ಗ್ರಾಮಾಭಿವೃದ್ಧಿಯ ಯೋಜನೆಗಳು ಯಶಸ್ವಿಯಾಗಿ ನಡೆಯಲು ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಆದರೆ ಹೆಚ್ಚಿನ ಕಡೆಗಳಲ್ಲಿ ಗ್ರಾಮಸಭೆಗಳಿಗೆ ಗ್ರಾಮಸ್ಥರ ಹಾಜರಾತಿ ಕಡಿಮೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ವಿನೂತನ ಅಭಿಯಾನದ ಮೂಲಕ ಗ್ರಾಮಸಭೆಯ ಕರಪತ್ರ ಮನೆ-ಮನೆಗೆ ತಲುಪಿಸುವ ಕೆಲಸವನ್ನು ಸವಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾ.ಪಂ.ಸದಸ್ಯರು ಹಾಗೂ ಪ್ರಮುಖರು ಮಾಡುತ್ತಿರುವುದು ವಿಶೇಷವಾಗಿದೆ.
Advertisement
ಪ್ರತೀ ಆರು ತಿಂಗಳಿಗೊಮ್ಮೆ ಗ್ರಾಮಸಭೆ ನಡೆಯುತ್ತದೆ. ಈ ಸಭೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿ, ಅಭಿವೃದ್ಧಿ ಕಾರ್ಯಗಳ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ಕ್ರಿಯಾಯೋ ಜನೆ ತಯಾರಿಸಲಾಗುತ್ತದೆ. ಗ್ರಾಮಸ್ಥರ ಅನಾಸಕ್ತಿಯಿಂದ ಗ್ರಾಮಸಭೆಗಳಲ್ಲಿ ಪ್ರಸ್ತಾವ ಗೊಂಡ ವಿಷಯಗಳ ಕುರಿತು ಕ್ರಿಯಾ ಯೋಜನೆ ತಯಾರಿಸುವುದು ಅಪರೂಪ. ತಮ್ಮ ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ಗ್ರಾಮಸ್ಥರಿಗೂ ಸರಿಯಾಗಿ ತಲುಪುತ್ತಿಲ್ಲ. ಮಾತ್ರವಲ್ಲ ಮಾಹಿತಿ ಪಡೆದುಕೊಳ್ಳಲೂ ಗ್ರಾಮಸ್ಥರು ಮುಂದಾಗುತ್ತಿಲ್ಲ. ಇದರಿಂದ ಗ್ರಾಮಸಭೆಗೆ ಹೋಗಿ ಏನು ಪ್ರಯೋಜನವಿಲ್ಲ ಎನ್ನುವುದು ಹೆಚ್ಚಿನ ಗ್ರಾಮಸ್ಥರ ಅಭಿಪ್ರಾಯ.
ಸವಣೂರು ಗ್ರಾ.ಪಂ.ನ ವಾರ್ಡ್ 1ರಲ್ಲಿ ಗ್ರಾ.ಪಂ. ಸದಸ್ಯರಾದ ಸತೀಶ್ ಬಲ್ಯಾಯ, ಗಾಯತ್ರಿ ಬರೆಮೇಲು, ಸತೀಶ್ ಅಂಗಡಿಮೂಲೆ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ. ಸುಪ್ರಿತ್ ರೈ ಖಂಡಿಗ, ನಿರ್ದೇಶಕ ಪ್ರಜ್ವಲ ಕೆ.ಆರ್.,
Related Articles
Advertisement
ಅಭಿವೃದ್ಧಿಯ ಭಾಗಗ್ರಾಮಸಭೆ ಆಯಾ ಊರಿನ ಸಹಕಾರಿ ಸಂಘಗಳ ಮಹಾಸಭೆಯಷ್ಟೇ ಪ್ರಾಮುಖ್ಯತೆ ಯನ್ನು ಪಡೆದಿರುವ ಅಭಿವೃದ್ಧಿಯ ಒಂದು ಭಾಗ. ವಸತಿರಹಿತರಿಗೆ ನಿವೇಶನ ನೀಡಲು, ವಿವಿಧ ಸರಕಾರಿ ಯೋಜನೆಗಳ ಫಲಾನು ಭವಿಗಳನ್ನು ಆಯ್ಕೆ ಮಾಡಲು ಇದು ನೆರವಾಗುತ್ತದೆ. ಒಂದು ಭಾಗದಲ್ಲಿ ನಡೆದ ಪ್ರಯತ್ನ ಅಲ್ಲಿಗೆ ಸೀಮಿತವಾಗಬಾರದು. ಈ ಪ್ರಯೋಗ ಎಲ್ಲೆಡೆ ನಡೆಯಬೇಕು. ಹಾಗಾದಾಗ ಮಾತ್ರ ಗ್ರಾಮ ಸರಕಾರ ಅಂದರೆ ಗ್ರಾ.ಪಂ.ಗಳು ಕೂಡಾ ಮಾದರಿ ಆಡಳಿತ ನಡೆಸಲು ಸಾಧ್ಯ. ಒಳ್ಳೆಯ ಬೆಳವಣಿಗೆ
ನಮ್ಮ ಗ್ರಾ.ಪಂ. ಸದಸ್ಯರು ಗ್ರಾಮಸಭೆಯ ಕುರಿತು ಮನೆ-ಮನೆಗೆ ಕರಪತ್ರ ಹಂಚಿ ಗ್ರಾಮಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಗ್ರಾ.ಪಂ.ನಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತ ಮಂಡಳಿ, ಅಧಿಕಾರಿ ವರ್ಗ ಇರುವುದರಿಂದ ಯೋಜನೆ, ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ.
– ಇಂದಿರಾ ಬಿ.ಕೆ.,
ಅಧ್ಯಕ್ಷರು, ಸವಣೂರು ಗ್ರಾ.ಪಂ.