Advertisement

ಗುರಿಯಿಂದ ಜೀವನ ಪರಿಪೂರ್ಣ: ರವೀಶ್‌ ತಂತ್ರಿ

09:38 AM Jan 16, 2019 | |

ಸವಣೂರು: ಜೀವನದಲ್ಲಿ ಗುರಿ ಇದ್ದಾಗ ಮಾತ್ರ ಪರಿಪೂರ್ಣತೆ ದೊರೆಯಲು ಸಾಧ್ಯ. ಭಾರತದಲ್ಲಿ ಅನೇಕ ಮಂದಿ ಪರಿಪೂರ್ಣರಾಗಿ ಇದ್ದರೂ ಅವರು ಸರಳವಾಗಿ ಇರುವುದರಿಂದ ಬಾಹ್ಯವಾಗಿ ಗೋಚರಿಸುವುದಿಲ್ಲ ಎಂದು ಕುಂಟಾರು ರವೀಶ ತಂತ್ರಿ ಹೇಳಿದರು.

Advertisement

ಕುದ್ಮಾರು ತಿರಂಗ ವಾರಿಯರ್ ಆಶ್ರಯ ದಲ್ಲಿ ಕುದ್ಮಾರು ಹಿ.ಪ್ರಾ. ಶಾಲೆಯಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮತ್ತು ಸೈನಿಕರ ದಿನಾಚರಣೆಯಲ್ಲಿ ಸಾಧಕರನ್ನು ಸಮ್ಮಾನಿಸಿ ಮಾತನಾಡಿದರು.

ಭಾರತದ ಸೈನ್ಯ ವಿಶ್ವದಲ್ಲೇ ಉತ್ತಮ ಹೆಸರು ಪಡೆದುಕೊಂಡಿದೆ. ಭಾರತೀಯ ಸೈನಿಕರು ಕೆಚ್ಚು ಮತ್ತು ಶೌರ್ಯಗಳಿಂದ ವಿಶ್ವ ಮಟ್ಟದಲ್ಲಿ ಹೆಸರು ಪಡೆದುಕೊಂಡಿದ್ದಾರೆ. ಇಂತಹ ಅನೇಕ ಸಾಧಕರು ಭಾರತದಲ್ಲಿ ದ್ದಾರೆ. ಯುವಕರು ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಸೇರುವಂತಾಗಬೇಕು. ಇದು ತಾಯಿ ನಾಡಿಗೆ ನಾವು ನೀಡುವ ಸೇವೆ ಎಂದರು.

ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾತನಾಡಿ, ಸೈನ್ಯದ ಬಲಿಷ್ಠತೆ ಮೇಲೆ ಹೊಂದಿಕೊಂಡು ದೇಶದ ಸುರಕ್ಷತೆ ನಿಂತಿದೆ. ಜಾತಿ ಧರ್ಮಗಳ ವಿಂಗಡಣೆ ಇಲ್ಲದಿರುವುದು ಭಾರತೀಯ ಸೆ„ನ್ಯದಲ್ಲಿ ಮಾತ್ರ ಎಂದರು.

ಸಮ್ಮಾನ
ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಪ್ರಣಮ್ಯಾ, ತಾ|ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶುಭಲಕ್ಷ್ಮೀ ಬರೆಪ್ಪಾಡಿ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ವರುಣ್‌ ಶೆಟ್ಟಿ, ಕರಾಟೆಪಟು ಬ್ರಿಜೇಶ್‌, ರಾಷ್ಟ್ರೀಯ ಚೆಸ್‌ ಆಟಗಾರ್ತಿ ಶಾಲ್ಮಿಕಾ ಕೆ.ಜೆ. ಅವರನ್ನು ಸಮ್ಮಾನಿಸಲಾಯಿತು.

Advertisement

ಉದ್ಯಮಿ ಅಮೃತ್‌ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಶಿವಪ್ರಸಾದ್‌ ಶೆಟ್ಟಿ, ಲೋಕೇಶ್‌ ಬಿ.ಎನ್‌. ಉಪಸ್ಥಿತರಿದ್ದರು. ಪ್ರಸಾದ್‌ ಪಾಂಗಣ್ಣಾಯ ಸ್ವಾಗತಿಸಿ, ವಂದಿಸಿದರು. ಗಣೇಶ್‌ ನಡುವಾಲ್‌ ನಿರೂಪಿಸಿದರು.

ಅನಂತರ ಗಾಯಕ ರಾಜೇಶ್‌ಕೃಷ್ಣನ್‌, ಸರಿಗಮಪ ಖ್ಯಾತಿಯ ಶ್ರೀಹರ್ಷ, ಹಾಡುತಿದೆ ಕನ್ನಡ ಕೋಗಿಲೆ ವಿಜೇತೆ ಅಖೀಲಾ ಪಜಿಮಣ್ಣು ತಂಡದಿಂದ ಅದ್ದೂರಿ ಮ್ಯೂಸಿಕಲ್‌ ನೈಟ್ಸ್‌ ಸಂಗೀತ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next