Advertisement
ಪಟ್ಟಣ ಸೇರಿದಂತೆ ತಾಲೂಕಿನ ತೆಗ್ಗಿಹಳ್ಳಿ, ಹತ್ತಿಮತ್ತೂರ, ಯಲವಿಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳಿಗೆ ಹಾಗೂ ವಿವಿಧ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಆಹಾರ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರದಿಂದ 2 ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದೆ. ಎಲ್ಲರಿಗೂ ಸಮರ್ಪಕವಾಗಿ ಹಂಚಲಾಗುವುದು. ಸಾರ್ವಜನಿಕರು ಒಮ್ಮೆಲೇ ಪಡಿತರ ಕೇಂದ್ರಕ್ಕೆ ಮುಗಿಬೀಳದೆ, ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಪಡೆದುಕೊಳ್ಳಬೇಕು ಎಂದು ಹೇಳಿದರು.
ತಿಳಿಸಬೇಕು. ಹೆಚ್ಚಿನ ಕೌಂಟರ್‌ಗಳನ್ನು ತೆರೆದು ಗ್ರಾಹಕರೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು. ಎಎಸ್‌ಪಿ ರಾಮಚಂದ್ರ ಬಾಲದಂಡಿ, ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ, ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ, ಇಒ ಪಿ. ಮುನಿಯಪ್ಪ, ಎಸ್.ಸಿ. ವಣಗೇರಿ, ಶಶಿಧರ ಜಿ.ಎಂ., ನಾಗರಾಜ ಸೂರ್ಯವಂಶಿ, ಡಿ.ಎಂ. ಪಾಟೀಲ, ರವಿ ಮಾಚಕ್ಕನೂರ ಇನ್ನಿತರರಿದ್ದರು.